Product Description
ಯಾವುದೇ ಶ್ರೇಷ್ಠ ಸೃಜನಶೀಲ ಕಲೆ ತನ್ನನ್ನು ಬಿಟ್ಟುಕೊಡುವುದಿಲ್ಲ; ಬಿಚ್ಚಿಕೊಳ್ಳುವುದಿಲ್ಲ. ಅದು ತನ್ನಷ್ಟಕ್ಕೇ ಒಂದು ಅನುಭವ, ಅದು ಅನಿರ್ವಚನೀಯ. ಅಂಥ ಕ್ಷಣಗಳಿಗಾಗಿ ತುಡಿತ ಸಹಜ. ಆದರೆ, ಆ ಅನುಭವ ನೆರಳು - ಬೆಳಕಿನಂತೆ ಒಮ್ಮೆ ಸನಿಹ - ಒಮ್ಮೆ ದೂರ - ಬಹುದೂರ. ದಕ್ಕಿಸಿಕೊಳ್ಳಲೇಬೇಕಾದ ಅನುಭವ - ಆನಂದಕ್ಕೆ ಯಾವುದೇ ಕಲಾಕೃತಿಗೆ ಇರಬಹುದಾದ ಕ್ಲಿಷ್ಟತೆ - ಸಾಧ್ಯತೆಗಳನ್ನು ಕಂಡುಕೊಳ್ಳಲು ಹುಡುಕಾಟ. ಅಮೂರ್ತವಾಗಿರಬಹುದಾದ್ದನ್ನು ಅಥವಾ ಹಾಗೆ ಭಾವಿಸುವಂಥ ಕೃತಿಯ ಪ್ರವೇಶಕ್ಕೊಂದು ಪಥ ದರ್ಶನವಾಗಬೇಕು.
ಪ್ರೊ. ಎಂ.ಎಚ್.ಕೆ. ಹೆಬ್ಬಾಗಿಲು ತೆರೆದು ಒಳಗಿನ ಅಗಾಧತೆಗೊಂದು ಪುಟ್ಟ ಸೊಡರ ಬೆಳಕನ್ನು ಈ ‘ಸಾಹಿತ್ಯ ಕಲೆ’ಯ ಮೂಲಕ ಹರಿಸಿದ್ದಾರೆ. ಇದೀಗ ಕಲಾ ರಸಿಕನಿಗೆ ಗ್ರಹಿಸಲು, ಕಲ್ಪಿಸಲು, ಭಾವಿಸಲು, ಒಂದು ಅನನ್ಯ ಅನುಭವವಾಗಿಸಿಕೊಳ್ಳಲು ಅನಂತ ಅವಕಾಶ!