Product Description
ಕನ್ನಡ ಚಿತ್ರರಂಗ ಎಂದೆಂದೂ ಮರೆಯಲಾಗದಂಥ ಹಾಗೂ ಮರೆಯಬಾರದಂಥ ಚೇತನಗಳ ಪೈಕಿ ಪಾರ್ವತಮ್ಮ ರಾಜ್ಕುಮಾರ್ ಅವರೂ ಒಬ್ಬರು. ವರನಟ ಡಾ.ರಾಜ್ಕುಮಾರ್ ಅವರ ಪತ್ನಿ ಎಂಬುದನ್ನು ಅರೆಕ್ಷಣ ಮರೆತು ಯೋಚಿಸಿದರೂ, ಪಾರ್ವತಮ್ಮ ಅವರನ್ನು ಪ್ರೀತಿ, ಅಕ್ಕರೆ ಹಾಗೂ ಗೌರವ ಭಾವದೊಂದಿಗೆ ನೆನಪಿಸಿಕೊಳ್ಳಲು ನೂರು ಕಾರಣಗಳು ಸಿಗುತ್ತವೆ. ಮಂಜುನಾಥ ಚವ್ಹಾಣ್ ಈ ಕೃತಿಯನ್ನು ರಚಿಸುವ ಮೂಲಕ ಕನ್ನಡಿಗರಿಗೆ ಪ್ರಾಯಶಃ ಮೊದಲ ಬಾರಿಗೆ ಪಾರ್ವತಮ್ಮನವರ ವ್ಯಕ್ತಿತ್ವ, ಆಶಯ, ಕಾಳಜಿ, ಕೊಡುಗೆಯನ್ನು ಸೊಗಸಾಗಿ ತಿಳಿಸಿಕೊಟ್ಟಿದ್ದಾರೆ. ಈ ಕೃತಿಗಾಗಿ ಚವ್ಹಾಣ್ ದಂಪತಿಗಳು ಪಾರ್ವತಮ್ಮನವರ ಜತೆ ಹತ್ತಾರು ತಾಸುಗಳ ಕಾಲ ಕುಳಿತು, ಮಾತಾಡಿ, ನೋಟ್ ಮಾಡಿಕೊಂಡು, ಪುನಃ ಪುನಃ ಅವರೊಂದಿಗೆ ಚರ್ಚಿಸಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಕೊನೆಗೆ ಇದನ್ನು ನಮ್ಮ ಕೈಗಿತ್ತಿದ್ದಾರೆ. ಇದು ಕೇವಲ ಪಾರ್ವತಮ್ಮನವರ ಜೀವನ ಕಥೆಯಾಗದೇ, ಕನ್ನಡ ಚಿತ್ರರಂಗದ ಅರ್ಧ ಶತಮಾನದ ಒಂದು ಇತಿಹಾಸ ಅವತರಣಿಕೆಯಾಗಿ ಹೊಮ್ಮಿರುವುದು, ಈ ಕೃತಿಯ ಹೆಚ್ಚುಗಾರಿಕೆ.