ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಅಪಾರ ಮೆಚ್ಚುಗೆ ಪಡೆದಿದೆ ಈ ಕಾದಂಬರಿ ಆಧುನಿಕ ಮನೋಭಾವದ ವಿದ್ಯಾವಂತೆ ಕಾಳಿಂದಿ. ಇವಳ ಕಛೇರಿಯಲ್ಲಿ ಕೆಲಸ ಮಾಡಲು ಬಂದವನು ಅಮೆರಿಕಾದ ತರುಣ ರಿಚಿ. ಅವನಿಗೆ ಕಾಳಿಂದಿಯನ್ನು ಮದುವೆ ಆಗುವ ಬಯಕೆ. ಆಗ ಕಾಳಿಂದಿಯ ಕರಾಳ ಕಥೆ ಅನಾವರಣವಾಗುತ್ತದೆ. ಕುತೂಹಲ ಹುಟ್ಟಿಸುವ ಕಥೆ ಹಲವು ಅನೂಹ್ಯ ತಿರುವುಗಳಲ್ಲಿ ಸಾಗಿ ಅಚ್ಚರಿಯ ಅಂತ್ಯ ಕಾಣಿಸುತ್ತದೆ ಓದುಗ ಒಂದೇ ಪಟ್ಟಿನಲ್ಲಿ ಓದಲು ತವಕಿಸುವ ಕಾದಂಬರಿ ಇದು.