Product Description
ಮನುಷ್ಯ ಯಾವ ಬಂಧನದಿಂದ ತಪ್ಪಿಸಿಕೊಂಡರೂ, ಕಾನೂನಿನ ಬಂಧನದಿಂದ ತಪ್ಪಿಸಿಕೊಳ್ಳಲಾರ; ಕಾನೂನಿನ ತಿಳಿವಳಿಕೆಯಿಲ್ಲದೆ ಅವನು ತನ್ನ ಬದುಕು ಸಾಗಿಸಲಾರ! ಕಾನೂನು ತಿಳಿದಿಲ್ಲ ಎನ್ನುವುದು ಅಕ್ಷಮ್ಯವಾಗುತ್ತದೆ. ಆದ್ದರಿಂದ ಶ್ರೀಸಾಮಾನ್ಯನಿಗೂ ಕಾನೂನಿನ ಪರಿಚಯ ಮಾಡಿಕೊಡುವುದು ಸಮಾಜದ ಕರ್ತವ್ಯ; ಕಾನೂನು ಬಲ್ಲವರ ಹೊಣೆ. ಈ ದಿಕ್ಕಿನಲ್ಲಿ ‘ನಿತ್ಯಜೀವನದಲ್ಲಿ ಕಾನೂನು’ ಒಂದು ಗಮನಾರ್ಹ ಪ್ರಯತ್ನ. ಇದೊಂದು ಜನಪ್ರಿಯ ಪುಸ್ತಕ. ಇದರಲ್ಲಿ ಪಾಂಡಿತ್ಯದ ಭಾರವಿಲ್ಲ; ತಾಂತ್ರಿಕತೆಯ ಗೊಂದಲವಿಲ್ಲ. ಕಥೆ ಹೇಳುವ ರೀತಿಯಲ್ಲಿ ಕಾನೂನನ್ನು ಇಲ್ಲಿ ಪರಿಚಯಿಸಲಾಗಿದೆ. ಮೂಲಭೂತ ಹಕ್ಕುಗಳು, ರಿಟ್ ಅರ್ಜಿ, ಉಯಿಲು, ಹೆಸರು ಬದಲಾವಣೆ, ಆಸ್ತಿ ಕೊಳ್ಳುವುದು, ದಾಖಲೆಗಳನ್ನು ನೋಂದಾಯಿಸುವುದು, ಕೇವಿಯೆಟ್ ಸಲ್ಲಿಸುವುದು, ಕರಾರುಗಳನ್ನು ಸಿದ್ಧಪಡಿಸುವುದು - ಮುಂತಾದ ಹತ್ತು ಹಲವು ಸಂಗತಿಗಳಿಗೆ ಸಂಬಂಧಿಸಿದ ಕಾನೂನಿನ ಸ್ವರೂಪವನ್ನು ಈ ಪುಸ್ತಕ ವರ್ಣಿಸುತ್ತದೆ. ಓದುಗರಲ್ಲಿ ಒಂದು ಎಚ್ಚರ ಮೂಡಿಸುತ್ತದೆ. ನೇರವಾಗಿ, ಖಚಿತವಾಗಿ, ಸರಳವಾಗಿ ಓದುಗರ ಆಸಕ್ತಿ ಆರದಂತೆ, ಕುತೂಹಲ ಕೊನೆಗೊಳ್ಳುವಂತೆ, ದೈನಂದಿನ ಬದುಕಿಗೆ ತೀರ ಅಗತ್ಯವಾದ ಕೆಲವು ಕಾನೂನುಗಳನ್ನು ನಿರೂಪಿಸುವುದು ಈ ಬರವಣಿಗೆಯ ಸ್ವಾರಸ್ಯವಾಗಿದೆ.