Product Description
‘ಫಿಸಿಕ್ಸ್ ಮತ್ತು ಐನ್ಸ್ಟೈನ್’ - ಇದು ವಿಜ್ಞಾನಲೋಕದ ಒಂದು ವಿಶಿಷ್ಟಕತೆ. ಆಲ್ಬರ್ಟ್ ಐನ್ಸ್ಟೈನ್ ನಡೆಸಿದ ಯುಗಪ್ರವರ್ತಕ ಸಂಶೋಧನೆಗಳ ಪವಾಡಕ್ಕೆ ನೂರು ವರ್ಷಗಳು ತುಂಬಿದಂತೆ ಜಗತ್ತಿನಲ್ಲಿಡೀ ಆಸಕ್ತ ಜನ ಇದನ್ನು ಕೇಳುತ್ತಿದ್ದಾರೆ. ಆ ಕತೆ ಸಂಕ್ಷಿಪ್ತವಾಗಿ ಕನ್ನಡ ಓದುಗರಿಗಾಗಿ ಇಲ್ಲಿದೆ. ಮನುಷ್ಯನ ಅನುಭವಕ್ಕೆ ಬರುವ ಅನಂತ ವೈವಿಧ್ಯದ ತಿಳಿವಿಗಾಗಿ ನಡೆಸಿದ ಹುಡುಕಾಟದಿಂದ ಫಿಸಿಕ್ಸ್ ಅಥವಾ ಭೌತವಿಜ್ಞಾನ ಎಂಬ ಅಧ್ಯಯನ ರೀತಿ ಬೆಳೆದದ್ದು - ಜರ್ಮನಿಯಲ್ಲಿ ಹುಟ್ಟಿ ಅಮೆರಿಕದಲ್ಲಿ ಮರೆಯಾದ ಐನ್ಸ್ಟೈನ್, ಜಗತ್ತಿನಲ್ಲಿ ಎಲ್ಲರಿಗೂ ತಮ್ಮವನೆನಿಸುವಂತೆ ಸಾಗಿದ ಜೀವನರೇಖೆ - ಬಾಲ್ಯ, ಬೆರಗು, ಅರಿವು ಒಂದಾಗಿ ಮನುಷ್ಯನಲ್ಲಿ ಪ್ರಕಟವಾಗುವ ರೀತಿ - ಬಾಳು, ಬೆರಗು, ಅರಿವು ಒಂದಾಗಿ ಮನುಷ್ಯನಲ್ಲಿ ಪ್ರಕಟವಾಗುವ ರೀತಿ - ಬಾಳು, ಭಾವ, ಸ್ವಾತಂತ್ರ್ಯ, ದೇವರು, ಧರ್ಮ, ರಾಜಕೀಯ, ವಿಜ್ಞಾನಗಳನ್ನು ಶ್ರೇಷ್ಠ ವಿಜ್ಞಾನಿಯೊಬ್ಬ ಕಂಡ ಬಗೆ. ಫಿಸಿಕ್ಸ್ ಇಷ್ಟವಾದವರಿಗೆ ಕಷ್ಟವಾಗದಿರಲು ಸಾಗಬೇಕಾದ ದಾರಿ - ಇವೆಲ್ಲ ಈ ಕೃತಿಯಲ್ಲಿ ತುಂಬಿರುವ ಹೂರಣದಲ್ಲಿವೆ. ಇಲ್ಲಿ ಗಣಿತದ ಸೂತ್ರಗಳಿಲ್ಲ, ಪಠ್ಯಗಳ ಬಿಗಿ ಬಂಧವಿಲ್ಲ, ಇರುವುದಕ್ಕಿಂತ ಹೆಚ್ಚನ್ನು ಹೇಳಬಲ್ಲ ಚಿತ್ರಗಳಿವೆ. ಅವುಗಳನ್ನು ನೋಡಿ - ಅಕ್ಷರಗಳು ಹೇಳಲಾಗದ ಅರ್ಥವಿದೆ.