Product Description
ಋಗ್ವೇದ', 'ಯಜುರ್ವೇದ', 'ಸಾಮವೇದ' ಮತ್ತು 'ಅಥರ್ವಣವೇದ' ಎಂಬ ನಾಲ್ಕು ಬಗೆಗಳಾಗಿ ರೂಪಗೊಂಡಿರುವ ಹಾಗೂ 'ಶೃತಿ', 'ಆಮ್ನಾಯ' ಅಥವಾ 'ನಿಮಗ' ಎಂದೂ ಕರೆಯಲಾಗುವ ಅರಿವಿನ ಮಹಾ ಬೆಳಕಾದ 'ವೇದ'ದ ಕುರಿತು ಪ್ರಸ್ತುತ ಕೃತಿಯು ಅನೇಕ ವಿಷಯಗಳನ್ನು ಪ್ರಶ್ನೋತ್ತರಗಳ ಮೂಲಕ ಪ್ರಸ್ತುತಪಡಿಸುವಂತೆ ಜ್ಞಾನದ ಭಾಂಡಾರವಾಗಿ 'ವೇದಾಂತ'ಗಳೆಂದೂ ಕರೆಯಲಾಗುವ 'ಉಪನಿಷತ್ತು'ಗಳ ಕುರಿತೂ ಸಹ ತಿಳಿಸಿ ಕೊಡುತ್ತದೆ. 'ಪುರಣಾ'ಗಳ ಬಗೆಗೂ ಕೃತಿಯಲ್ಲಿ ಅನೇಕ ಉಪಯುಕ್ತ ಮಾಹಿತಿಗಳಿವೆ.
ನಿವೃತ ಪ್ರಾಚಾರ್ಯ ಶ್ರೀ ಎಂ.ವಿ. ನಾಗರಾಜರಾವ್ ಅವರು ಅಪಾರ ಶ್ರಮವಹಿಸಿ ರೂಪಿಸಿಕೊಟ್ಟಿರುವ 'ವೇದ, ಉಪನಿಷತ್ತು, ಪುರಾಣ-ನಿಮಗೆಷ್ಟು ಗೊತ್ತು?' ಕೃತಿಯಲ್ಲಿ ೨೨೦೦ ರಸ ಪ್ರಶ್ನೋತ್ತರಗಳಿದ್ದು ಆಸಕ್ತರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಉಪಯೋಗಕ್ಕೆ ಬರುತ್ತವೆ.