Product Description
ಇಂದಿನ ಆಧುನಿಕ ಕಾಲದಲ್ಲಿಯೂ ವೈದ್ಯಶಾಸ್ತ್ರವು ವಿವರಿಸಲಾಗದ ಎಷ್ಟೋ ಬಗೆಯ ರೋಗಗಳ ಅಸಹಜತೆಯನ್ನು ನಾವು ಕಾಣುತ್ತೇವೆ. ಅಂದರೆ ಸಸ್ಯಾಹಾರಿಗಳಾಗಿಯೂ, ಮದ್ಯಪಾನ, ಧೂಮಪಾನಗಳನ್ನು ಕಣ್ಣೆತ್ತಿ ನೋಡದವರಿಗೂ ಕೂಡ ಕ್ಯಾನ್ಸರ್, ಲಿವರ್ ವಿಫಲತೆ, ಮೂತ್ರಪಿಂಡಗಳ ವೈಫಲ್ಯ ಮುಂತಾದ ಭೀಕರ ರೋಗಗಳು ಬರುವುದನ್ನು ನಾವೆಲ್ಲಾ ಕಾಣುತ್ತಿದ್ದೇವೆ. ಹಾಗಾದರೆ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಮ್ಮಲ್ಲಿ ಒಡಮೂಡದಿರದು. ಅವುಗಳಿಗೆ ಉತ್ತರವೇ ಈ ಕೃತಿ.
ಈ ಕೃತಿಯಲ್ಲಿ ಮಾನವನ ದೇಹದ ಯಾವ ಯಾವ ಅಂಗಗಳಿಗೆ ಯಾವ ಯಾವ ಗ್ರಹಗಳು, ನಕ್ಷತ್ರಗಳು ಹಾಗು ರಾಶಿಗಳು ಸಂಬಂಧವನ್ನು ಹೊಂದಿರುತ್ತವೆ, ಯಾವ ಯಾವ ಗ್ರಹಗಳ ಪ್ರಭಾವದಿಂದ ಯಾವ ಯಾವ ರೋಗಗಳ ಸಮಸ್ಯೆಗಳುಂಟಾಗುತ್ತವೆ, ಅವುಗಳ ನಿವಾರಣೆ ಹೇಗೆ ಎಂಬುದನ್ನು ಮೊಟ್ಟ ಮೊದಲ ಬಾರಿಗೆ 'ಮೂಲಸತ್ವ ಶೇಕಡಾವಾರು ಪದ್ಧತಿ' ಎಂಬ ನವೀನ ಮಾದರಿಯ ಗಣಿತ ಲೆಕ್ಕಾಚಾರದ ಮೂಲಕ ಸವಿಸ್ತಾರವಾಗಿ ವಿವರಿಸಲಾಗಿದೆ.