Product Description
ಸಾಹಿತ್ಯ ವಿಮರ್ಶೆಯೆಂದರೆ ಒಂದು ಕೃತಿಯನ್ನು ಆದಷ್ಟು ಪರಿಪೂರ್ಣವೆನ್ನುವಂತೆ ಓದಿಕೊಳ್ಲಬೇಕೆಂಬ ಆಶಯ. ಆದರೆ, ಈ ಆದರ್ಶ ಪ್ರಾಯಶಃ ಎಂದೂ ಸಂಪೂರ್ಣ ಸಿದ್ಧಿಸಲಾಗದ ಆಶಯ. ಈ ಮಿತಿಯ ಅರಿವಿನಿಂದ ವಿಮರ್ಶೆಗೆ ಅಗತ್ಯವಾದ ವಿನಯವೂ, ಸಂವಾದದ ಮುಖೇನ ಪೂರ್ವಗ್ರಹಗಳಿಂದ ಮುಕ್ತವಾಗುವ ಬಯಕೆಯೂ ಹುಟ್ಟಿಕೊಳ್ಳುತ್ತದೆ. ಆದರೆ ತನಗೆ ದಕ್ಕುವಷ್ಟು ಪೂರ್ಣವಾಗಿ ಓದಬೇಕೆಂಬ ಆಶಯದಿಂದ ನೋಟ ಗಾಢವಾಗುತ್ತದೆ; ಸಂವಾದಕ್ಕೆ ಅರ್ಹತೆ ಪಡೆದಂತಾಗುತ್ತದೆ ಎಂಬ ನಂಬಿಕೆಯಿಂದ ಈ ಮುನ್ನುಡಿಗಳು ರಚಿತವಾಗಿವೆ. ಮುನ್ನುಡಿ ಎನ್ನುವುದು ಬರೀ ಪ್ರಾಸ್ತಾವಿಕ ಮಾತುಗಳಷ್ಟೇ ಅಲ್ಲ; ಅದು ಆಯಾ ಸಂದರ್ಭದ ತತ್ಕಾಲೀನತೆಯಲ್ಲಿ ನಡೆಯುವ ಸಾಹಿತ್ಯ ವಿಮರ್ಶೆ; ಸತತವಾದ ಸಾಹಿತ್ಯಾಭ್ಯಾಸದ ಸಂವಾದ ಎಂಬುದು ಈ ಸಂಕಲನದಿಂದ ಸ್ಪಷ್ಟಗೊಳ್ಳುತ್ತದೆ.