Product Description
ಅನಂತಮೂರ್ತಿಯವರ ಸಾಹಿತ್ಯದಲ್ಲಿ ಚರಿತ್ರೆಯ ಶೋಧ ಅನುಭವದ ನೆಲೆಯಲ್ಲಿ ನಡೆಯುವುದರಿಂದ ಅದು ಆತ್ಮಚರಿತ್ರೆಯೂ ಆಗುವುದು ಅನಿವಾರ್ಯ. ‘ಸೂರ್ಯನ ಕುದುರೆ’ಯ ಎಲ್ಲ ಕತೆಗಳ ನಾಯಕರೂ ಅನಂತಮೂರ್ತಿಯವರ ವ್ಯಕ್ತಿತ್ವದ ಆಂಶಿಕ ಬಿಂಬ-ಪ್ರತಿಬಿಂಬಗಳೇ ಆಗಿವೆ. ಈ ಕತೆಗಳು ಸಮಕಾಲೀನ ಚರಿತ್ರೆಯ ಶೋಧದಂತೆ ವ್ಯಕ್ತಿತ್ವದ ಶೋಧಗಳೂ ಆಗಿವೆ. ‘ಸೂರ್ಯನ ಕುದುರೆ’ಯಲ್ಲಿ ಈ ವ್ಯಕ್ತಿತ್ವದ ಆಧುನಿಕ ಅವತಾರ, ‘ಅಕ್ಕಯ್ಯ’ದಲ್ಲಿ ಈ ಆಧುನಿಕತೆಯ ಗೊಂದಲದಿಂದ ಪಾರಾಗುವ ಪ್ರಯತ್ನದ ಹಾಸ್ಯಾಸ್ಪದ ತೊಳಲಾಟ, ‘ಜರತ್ಕಾರು’ವಿನಲ್ಲಿ ಲೇಖಕರಾಗಿ ಅವರು ಅನುಭವಿಸಿದ, ಅನುಭವಿಸುವ ಉತ್ಕಟಾವಸ್ಥೆಗಳ ಅನಾವರಣ, ‘ಕಾಮರೂಪಿ’ಯಲ್ಲಿ ರಾಜಕೀಯದೊಡನೆ ಮುಖಾಮುಖಿ -- ಈ ಸಂಯುಕ್ತ ಶೋಧದ ಘಟ್ಟಗಳೇ ಆಗಿವೆ.