Product Description
ನಮ್ಮ ಮನಸ್ಸು ಮ್ಯಾಜಿಕ್ ಮಾಡುತ್ತಲೇ ಇರುತ್ತದೆ. ಅಸಾಧ್ಯವೆಂದು ತೋರುವ ಕನಸುಗಳನ್ನು ಹುಟ್ಟುಹಾಕುತ್ತದೆ, ಅನಂತರ ಅವನ್ನು ನನಸು ಮಾಡುವ ದಾರಿಗಳನ್ನು ತೋರುತ್ತಲೂ ಇರುತ್ತದೆ. ಆ ದಾರಿಗಳಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡುತ್ತ, ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ, ಸಾಧನೆ ಮಾಡುವುದು ನಮ್ಮ ಕೈಯಲ್ಲಿದೆ. ಇಂತಹ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಾದರೆ, ನಾವು ಬದಲಾಗಬೇಕಾಗುತ್ತದೆ. ಯಾವಾಗ ಎಂದರೆ ಈಗ, ಈ ಕ್ಷಣದಲ್ಲಿ. ಇಲ್ಲವಾದರೆ, ನಾಗಾಲೋಟದ ಬದುಕಿನಲ್ಲಿ ನಮ್ಮ ಪ್ರತಿಭೆ ಹಾಗೂ ತಾಕತ್ತುಗಳು ಕೆಲಸಕ್ಕೆ ಬಾರದೆ ಹೋದಾವು. ಚಿಕ್ಕ ಅಧ್ಯಯನಗಳ, ಕಥೆ-ಉದಾಹರಣೆಗಳ, ಆತ್ಮೀಯ ಬರಹದ ಈ ಕೃತಿ ನಮ್ಮ ಮನಸ್ಸಿನ ಅಪಾರ ಸಾಧ್ಯತೆಗಳ ಬಗ್ಗೆ ತಿಳಿಸಿಕೊಡುತ್ತದೆ