Product Description
ಶ್ರೀಧರ್ ಅವರ ಬರಹಗಳೆಂದರೆ ಅದು ಅಂಕಣ ಬರಹವಿರಲಿ, ಲೇಖನಗಳಿರಲಿ, ಪುಸ್ತಕವಿರಲಿ ಸಾಕಷ್ಟು ಅಧ್ಯಯನವನ್ನು ಒಳಗೊಂಡಿರುತ್ತದೆ. ಈಗಾಗಲೇ ತಮ್ಮ ‘ದಾದಾಗಿರಿಯ ದಿನಗಳು’ (೩ ಭಾಗಗಳಲ್ಲಿ), ‘ಎದೆಗಾರಿಕೆ’, ‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಎಂಬ ಅನುಭವ ಕಥನಗಳ ಮೂಲಕ ವಿಶಿಷ್ಟ ಅನುಭವ ಲೋಕವೊಂದನ್ನು ಕಟ್ಟಿಕೊಟ್ಟಿರುವ ಶ್ರೀಧರ್ ಅವರ ಮತ್ತೊಂದು ವಿಶಿಷ್ಟ ಕೃತಿ ಇದು. ಪ್ರಸ್ತುತ ಸಂಗತಿಗಳಿಗೆ ತಮ್ಮ ಪ್ರತಿಕ್ರಿಯೆಗಳ ಮೂಲಕ ಓದುಗರಿಗೆ ಚಿಂತನೆಗೆ ತೊಡಗಿಸುವ ಶ್ರೀಧರ್ ಅವರ ಆಸಕ್ತಿ, ಅಧ್ಯಯನದ ವ್ಯಾಪಿಯನ್ನು ಇಲ್ಲಿ ಕಾಣಬಹುದು. ಜನಪರವಾದ ಬೌದ್ಧಿಕ ಚಿಂತನೆ ಈ ಲೇಖನಗಳಲ್ಲಿ ಹರಳುಗಟ್ಟಿದೆ. ಈ ಬರಹಗಳಲ್ಲಿನ ದಿಟ್ಟತನ, ಕಾಳಜಿ ಅವರ ವ್ಯಕ್ತಿತ್ವದ ಸ್ಪಂದನಶೀಲ ಗುಣವನ್ನು ಎತ್ತಿ ತೋರಿಸುತ್ತದೆ. ಹಲವಾರು ವಿಚಾರಗಳು, ವ್ಯಕ್ತಿ, ಸಿದ್ಧಾಂತಗಳನ್ನು ಕುರಿತು ತಮ್ಮ ನಿಲುವು, ಕನಸು, ದುಗುಡ, ರೋಷ ಎಲ್ಲವನ್ನೂ ವ್ಯಕ್ತಪಡಿಸುವ ಶ್ರೀಧರ್ ಅವರ ವಿಶಿಷ್ಟ ಶೈಲಿಯನ್ನು ಓದಿಯೇ ಅರಿಯಬೇಕು.