Quantity
Product Description
ನಾನು ನನ್ನ ದೇಹವನ್ನು ತ್ಯಜಿಸಿದ್ದೇನೆ. ಅಶರೀರವಾಣಿಯಾಗಿದ್ದೇನೆ. ನಿಮಗೆ ಆಶ್ಚರ್ಯವಾಗಬಹುದು. ಈ ಕ್ಷಣ ನಾನು ನಿಮ್ಮ ಮುಂದೆಯೇ ನಿಂತಿದ್ದೇನೆ. 12 ಕನ್ನಡ ರಂಗಸಾಹಿತ್ಯದಲ್ಲಿ ವಿಶಿಷ್ಟವೆನಿಸುವ ಅತಿ ಸಣ್ಣ ನಾಟಕಗಳ ಸಂಕಲನವಿದು. ಸರಳ ಸಂಭಾಷಣೆ, ಸೀಮಿತ ಪಾತ್ರಗಳು ಮತ್ತು ಕನಿಷ್ಠ ರಂಗಪರಿಕರಗಳ ಅಗತ್ಯವಿರುವ ಈ ನಾಟಕಗಳು ಪ್ರಯೋಗಶೀಲತೆ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತವೆ. ಮಾನವ ಸ್ಥಿತಿ, ಅಸ್ತಿತ್ವ, ಸಂಬಂಧಗಳು, ಮತ್ತು ಆಧುನಿಕ ಬದುಕಿನ ಸಂಕೀರ್ಣತೆಗಳನ್ನು ಧ್ವನಿಪೂರ್ಣವಾಗಿ ನಿರೂಪಿಸುತ್ತವೆ. ಬಹುತೇಕ ನಾಟಕಗಳ ಕೊನೆಯಲ್ಲಿ ಸ್ಫೋಟಿಸುವ ನಿಗೂಢತೆ, ಅನಿರೀಕ್ಷಿತ ತಿರುವುಗಳು ಮತ್ತು ಮಿಂಚಿನಂತೆ ಥಟ್ಟನೆ ಹೊಳೆದು ಮಾಯವಾಗುವ ಜೀವನ ದರ್ಶನ ಓದುಗರನ್ನು ಬೆರಗುಗೊಳಿಸುತ್ತವೆ. ಕೇವಲ ಅರ್ಧ ನಿಮಿಷದಿಂದ ಎಂಟು ನಿಮಿಷಗಳಲ್ಲಿ ಪ್ರದರ್ಶಿಸಬಹುದಾದ ಈ ಅತಿ ಸಣ್ಣ ನಾಟಕಗಳ ಗುಚ್ಛ ನನಗೆ ನಿಜವಾಗಿಯೂ ಸಂತೋಷ ತಂದಿದೆ. ಡಾ. ಕೆ. ಪುಟ್ಟಸ್ವಾಮಿ
Author
Giridhar Khasnis
Binding
Soft Bound
Number of Pages
150
Publication Year
2025
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada