Select Size
Quantity
Product Description
ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾತಂತ್ರ್ಯ ಚಳುವಳಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ಆಕರ್ಷಣೆಗೆ ಒಳಗಾದ ಕಕ್ಕಿಲ್ಲಾಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕರ್ನಾಟಕದಲ್ಲಿ ಭೂಸುಧಾರಣೆ ಕಾನೂನು ಜಾರಿಗೆ ಬರಲು ಮತ್ತು ಅದು ರಾಜ್ಯದಲ್ಲಿ ಜಾರಿಯಾಗುವಂತೆ ನೋಡಿಕೊಳ್ಳಲು ಕಮ್ಯುನಿಸ್ಟ್ ಪಕ್ಷ ಮಹತ್ತರ ಪಾತ್ರ ವಹಿಸಿದೆ. ಈ ಹೋರಾಟಗಳಲ್ಲಿ ಕಾ| ಕಕ್ಕಿಲ್ಲಾಯರು ಮುಂಚೂಣಿಯಲ್ಲಿದ್ದರು. ಕಕ್ಕಿಲ್ಲಾಯರು ಒಬ್ಬ ಪ್ರಬುದ್ಧ ರಾಜಕಾರಣಿ, ಹೋರಾಟಗಾರ ಮಾತ್ರವಲ್ಲ; ಅವರು ಓದು ಮತ್ತು ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ‘ಮಾನವನ ನಡಿಗೆ ವಿಜ್ಞಾನದೆಡೆಗೆ’ ‘ಕಾರ್ಲ್ ಮಾರ್ಕ್ಸ್ ಬದುಕು ಬರಹ’ ‘ಫ್ರೆಡರಿಕ್ ಏಂಗಲ್ಸ್ ಜೀವನ, ಚಿಂತನೆ’ ‘ಭಾರತೀಯ ಚಿಂತನೆ’ ‘ಹಿಂದೂ ಧರ್ಮ’ ‘ಮಾರ್ಕ್ಸ್ವಾದ ಮತ್ತು ಭಗವದ್ಗೀತೆ’ ‘ಭಾರತಕ್ಕೊಂದು ಕವಲುದಾರಿ’ ‘ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗಳು’ ಮುಂತಾದ ಅನೇಕ ಕೃತಿಗಳನ್ನು ಅವರು ರಚಿಸಿದ್ದಾರೆ. ‘ಬರೆಯದ ದಿನಚರಿಯ ಮರೆಯದ ಪುಟಗಳು’ ಅವರ ಆತ್ಮಕಥೆಯಾಗಿದೆ.
Weight
400 GMS
Length
22 CMS
Width
14 CMS
Height
3 CMS
Author
B V Kakkilaya
Publisher
Nava Karnataka Publications Pvt Ltd
Publication Year
2021
Number of Pages
368
Binding
Soft Bound
Language
Kannada