Product Description
ಧಾರವಾಡದಿಂದ ಸಾಗಿ ದಿಲ್ಲಿಯನ್ನು ಸೇರಿದ ರೇಣುಕಾ ನಿಡಗುಂದಿ, ಕಳೆದ ಮೂರು ದಶಕಗಳಿಂದ ತಾವು ಕಂಡ ದಿಲ್ಲಿ ಬದುಕಿನ ವಿವಿಧ ಚಿತ್ರಗಳನ್ನು ಈ ಕೃತಿಯಲ್ಲಿ ಕಾಣಿಸಿದ್ದಾರೆ. ಬಲು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಗಂಡನ ವೃತ್ತಿಯ ಸಲುವಾಗಿ ದಿಲ್ಲಿ ಸೇರಿದ ರೇಣುಕಾ, ಹೇಗೆ ದಿಲ್ಲಿ ಎಂಬ ಊರು ತನ್ನನು ರೂಪಿಸಿತು, ಕ್ರಿಯಾಶೀಲ ಮತ್ತು ಸೃಜನಶೀಲಳನ್ನಾಗಿಸಿತು ಮತ್ತು ತನ್ನೆಲ್ಲ ಕನಸಿಗೆ ರಂಗು ತುಂಬಿ ಹೊಸ ಕನಸುಗಳನ್ನು ದಯಪಾಲಿಸಿತು ಎಂಬುದನ್ನು ‘ದಿಲ್ಲಿ ಡೈರಿಯ ಪುಟಗಳು’ ಎಂಬ ಈ ಕೃತಿಯಲ್ಲಿ ಆಪ್ತವಾಗಿ ಚಿತ್ರಿಸಿದ್ದಾರೆ. ದಿಲ್ಲಿಯೊಳಗೆ ತಾನು ಬೇರು ಬಿಡುತ್ತಾ ಸಾಗಿದ ಹಾಗೆ ದಿಲ್ಲಿ ಸಹ ತನ್ನೊಳಗೆ ಬೇರು ಬಿಡುತ್ತಾ ಹಣ್ಣು ತುಂಬಿದ ಹಲವು ಕೊಂಬೆಗಳನ್ನು ಕೈಗೆಟುಕಿಸುತ್ತಿರುವ ಬಗೆಯನ್ನು ಲೇಖಕಿ ಇಲ್ಲಿ ಕಟ್ಟಿಕೊಟ್ಟಿರುವ ರೀತಿ ಅನನ್ಯ. ಯಾವುದೇ ಚರಿತ್ರೆಯ ಪುಸ್ತಕಗಳಿಂದ ಎರವಲು ಪಡೆಯದೇ, ಲೇಖಕಿಯ ಅನುಭವದ ಮೂಸೆಯಿಂದ ಮೂಡಿದ ಚಿತ್ರಣಗಳು ಈ ಕೃತಿಯಲ್ಲಿವೆ.