Product Description
ಒಂದು ಸಮಕಾಲೀನ ರಾಜಕಾರಣದ ಗೋಸುಂಬೆತನವನ್ನು ವರ್ಣಿಸುವ ಕಾದಂಬರಿ. ದಲಿತರನ್ನು ಮನುಷ್ಯರೇ ಅಲ್ಲವೆನ್ನುವಷ್ಟರಮಟ್ಟಿಗೆ ಶೋಷಿಸಿ, ಜೊತೆಗೆ ದ್ವೇಷವನ್ನೂ ಸಾಧಿಸಿ ಮೇಲ್ವರ್ಗದವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅಮಾನವೀಯ ನಡವಳಿಕೆ ಪರಿಚಯಿಸಲ್ಪಟ್ಟಿದೆ. ದ್ವೇಷ-ತಿರಸ್ಕಾರ-ವ್ಯಂಗ್ಯ-ಪ್ರತೀಕಾರ ಕಾದಂಬರಿಯುದ್ದಕ್ಕೂ ವಿಜೃಂಭಿಸಿ ಸವರ್ಣೀಯರ ಹೊಲಸು ಮನಸ್ಸಿನ ಸಂಪೂರ್ಣ ಅನಾವರಣವಾಗಿದೆ. ಮತಧಾರ್ಮಿಕ ಆಚರಣೆಗಳ ಮಧ್ಯೆಯೇ ಬಿರುಕುಬಿಟ್ಟ ವ್ಯವಸ್ಥೆಯು ಜಾತಿ-ಜಾತಿಗಳ ಶ್ರೇಣೀಕರಣದ ವ್ಯವಸ್ಥೆಯೊಂದಿಗೆ ತಗುಲಿಕೊಂಡಾಗ ಆಗುವ ಅನಾಹುತಗಳು ಒಂದಲ್ಲ, ನೂರಾರು. ನಡುವೆ ಹೊತ್ತಿ ಉರಿಯುವ ಮನೆಯ ಗಳ ಹಿರಿಯುವ ಮಂದಿಗೆನು ಸಮಾಜೋದ್ಧಾರದ ಕನಸೇನೂ ಇರುವುದಿಲ್ಲ! ಎಂತೆಂತಹ ಚತುರ ಪಾತ್ರಗಳು ಇಲ್ಲಿ ಅನಾವರಣಗೊಂಡಿವೆ ಎಂದು ಓದಿ ನೋಡಿ.