Quantity
Product Description
ಪ್ರಕೃತಿಯೊಡನೆ ಸುಖ ದುಃಖಗಳ ಅವಿನಾಭಾವ ಸಂಬಂಧ ಹೊಂದಿದ್ದ ಅಪರೂಪದ ಲೇಖಕರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆಯುವ, ಬದುಕುವ ಬಗೆಯನ್ನು ನಮಗೆಲ್ಲ ಕಲಿಸಿದವರು. ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಈ ಕೃತಿಯಲ್ಲಿ ಲೇಖಕರ ಸ್ವಾನುಭವದ ಜೊತೆಜೊತೆಗೆ ಕೇಳಿದ, ಓದಿದ ಪುಟ್ಟ ಪುಟ್ಟ ಸಂಗತಿಗಳು ಜೊತೆಗೂಡಿ ಇಡಿಯಾಗಿ ತೇಜಸ್ವಿಯವರನ್ನು ಪರಿಚಯ ಮಾಡಿಕೊಡುತ್ತದೆ. ಈ ಬಿಡಿ ಬಿಡಿ ಬರಹಗಳನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಬಹುದು, ಎಲ್ಲಿ ಬೇಕಾದರೂ ನಿರ್ಗಮಿಸಬಹುದು. ತೇಜಸ್ವಿಯವರ ವಿಸ್ತಾರ ಬದುಕಿನ ಹಲವು ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಈ ಚಿಟ್ಟೆ ಕತೆಗಳು ಸಫಲವಾಗಿವೆ. ತೇಜಸ್ವಿಯವರ ಬದುಕು-ಬರಹಗಳ ಅಬ್ಬಿಗೆ ಇದೊಂದು ಪುಟ್ಟ ಹಾಯಿದೋಣಿಯಂತಹ ಪುಸ್ತಕ ತೇಜಸ್ವಿಯವರ ಸ್ವಭಾವವನ್ನು ಚೆನ್ನಾಗಿ ಅರಿತಿದ್ದ ಡಾ.ಎಚ್.ಎಸ್. ಸತ್ಯನಾರಾಯಣ ಅವರು ಯಾವುದೇ ಅತಿರೇಕದ ವರ್ಣನೆಗಿಳಿಯದೆ, ಒಂದು ಬಗೆಯ ನಿರ್ಲಿಪ್ತತೆಯನ್ನು ಕಾಯ್ದುಕೊಂಡು ತಮಗೆ ಕಾಣಿಸಿದ್ದನ್ನು ಓದುಗರಿಗೂ ತೋರಿಸುವ ಕೆಲಸ ಮಾಡಿದ್ದಾರೆ. ನಮ್ಮ ಪ್ರಕಾಶನದ ಹೆಮ್ಮೆಯ ಕಾಣಿಕೆ ಇದಾಗಿದೆ.
Binding
Soft Bound
Number of Pages
100
Publisher
Amulya Pustaka
Publication Year
2026
Author
Dr H S Sathyanarayana
Height
2 CMS
Length
22 CMS
Weight
200 GMS
Width
14 CMS
Language
Kannada