Select Size
Quantity
Product Description
ಅಪಾರಸಂಖ್ಯೆಯಲ್ಲಿ ನೆರೆದಿರುವ ನಿಮ್ಮನ್ನು ಕಂಡಾಗ ಕನ್ನಡ 'ಉಳಿಸು'ವ ಪ್ರಶ್ನೆಯೇ ಬರುವುದಿಲ್ಲ. 'ಬೆಳೆಸು'ವ ಪ್ರಶ್ನೆ ಮಾತ್ರ ಉಳಿಯುತ್ತದೆ...
..: 'ಕನ್ನಡವನ್ನು ಉಳಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಮೊದಲು ಹೇಳಿದೆ. ಏಕೆಂದರೆ ಈ ಉಳಿಸುವ ಹಪಾಹಪಿ ಈಗಿನದಲ್ಲ ಎರಡು ಸಾವಿರ ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಎರಡು ಸಾವಿರ ವರ್ಷಗಳ ಅವಧಿಯೊಳಗೆ ಕನ್ನಡ ಉಳಿಮಬಂದ ಮೇಲೆ ಅದು ಮುಂದೆ ಉಳಿಯುತ್ತದೊ ಇಲ್ಲವೋ ಎಂಬ ಪ್ರಶ್ನೆ ಬರುವುದಕ್ಕೆ ಸಂಭವವೇ ಇಲ್ಲ. ಆದರೆ, ಬೆಳೆಸುವ ಬಗ್ಗೆ ನಾವು ಬಹಳ ಚಿಂತನೆಯನ್ನು ನಡೆಸಬೇಕಿದೆ. ಆದರೂ, ಇತಿಹಾಸದ ವಿದ್ಯಾರ್ಥಿಯಾಗಿ ನಾನು ಒಂದೆರೆಡು ವಿಷಯಗಳ ಬಗ್ಗೆ ತಮ್ಮೊಂದಿಗೆ ಹಂಚಿಕೊಳ್ಳುವೆ. ಈ ಎರಡು ಸಾವಿರ ವರ್ಷಗಳಲ್ಲಿ ಕನ್ನಡ ಹೇಗೆ ಉಳಿದುಬಂದಿದೆ ಎಂಬುದನ್ನು ನಾವು ಕಂಡುಕೊಂಡರೆ, ಮುಂದೆ ಅನೇಕ ಸಾವಿರ ವರ್ಷಗಳವರೆಗೂ ಈ ಕನ್ನಡ ಉಳಿಯುಕೊಳ್ಳುತ್ತದೆ. ಅನೇಕ ಘಟ್ಟಗಳಲ್ಲಿ ಕನ್ನಡ ಆಪತ್ತನ್ನು ಎದುರಿಸಿ, ಉಳಿದುಬಂದಿದೆ. ಇವುಗಳಲ್ಲಿ ಸುಮಾರು ಸಂಗತಿಗಳು ನಿಮಗೆಲ್ಲರಿಗೂ ತಿಳಿದಿದೆ. ಕನ್ನಡ ಆರಂಭ ಕಾಲದೊಳಗೆ ಪ್ರಾಕೃತದ ಪ್ರಭಾವಕ್ಕೆ ಒಳಗಾಗಿತ್ತು. ಆನಂತರದ ಸಂಸ್ಕೃತದ ಪ್ರಭಾವಕ್ಕೆ ಒಳಗಾಗಿತ್ತು. ಆಗ ಮೂಡಿದ ಆತಂಕವೇನೆಂದರೆ, ಪಂಡಿತರೆಲ್ಲ ಸಂಸ್ಕೃತದಲ್ಲಿ ಮಾತನಾಡಿದರೆ ಕನ್ನಡ ಉಳಿಯುತ್ತೋ ಇಲ್ಲವೋ ಎಂಬುದಾಗಿತ್ತು. ಆ ಅನುಮಾನವನ್ನು ತಾನೇ ಬಗೆಹರಿಸಿಕೊಂಡು ಸಂಸ್ಕೃತದ ಸತ್ತ್ವವನ್ನು ಹೀರಿಕೊಂಡು ಕನ್ನಡ ದಷ್ಟಪುಷ್ಟವಾಗಿ ಬೆಳೆಯಿತು. ಅಂದರೆ ಕನ್ನಡ ಭಾಷೆಗೆ ಇರುವ ಮಹಾಶಕ್ತಿ ಎಂದರೆ ಎಂತಹ ಅವಘಡ, ಆಪತ್ತು, ಆತಂಕ ಬರಲಿ, ಅದನ್ನು ಚೀರ್ಣಿಸಿಕೊಂಡು ತಾನು ಬೆಳೆಯುವ ಶಕ್ತಿ ಕನ್ನಡ ಭಾಷೆಯಲ್ಲಿದೆ ಎಂಬುದನ್ನು ನಾವು ಮೊದಲು ಕಂಡುಕೊಳ್ಳಬೇಕಿದೆ...
ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ವಿಶೇಷ ಉಪನ್ಯಾಸದಿಂದ
Author
Sha Shettar
Publication Year
2025
Binding
Soft Bound
Publisher
Abhinava Prakashana
Number of Pages
200
Height
2 CMS
Length
22 CMS
Weight
200 GMS
Width
14 CMS
Language
Kannada