Select Size
Quantity
Product Description
ಲೇಖಕ ನಾಗೇಶ ಹೆಗಡೆ ಅವರ ‘ಅಡಗಲು ಸ್ಥಳವೆಲ್ಲಿ?’ ಕೃತಿಯು ವಿಜ್ಞಾನ ಸಂಬಂಧಿತ ಲೇಖನ ಸಂಕಲನವಾಗಿದೆ. ಜಗತ್ತಿನಲ್ಲಿ ನಡೆದ ಹಲವಾರು ವಿಚಾರಗಳನ್ನು ತಿಳಿಸುವ ಈ ಕೃತಿ, 1984ರಲ್ಲಿ ಭೋಪಾಲ್ ದುರಂತವನ್ನು ತಿಳಿಸುತ್ತದೆ. ಕೃತಿಯಲ್ಲಿ ನಾಗೇಶ ಹೆಗಡೆ ಅವರು ತಿಳಿಸುವ ಕೆಲವೊಂದು ವಿಚಾರಗಳು ಹೀಗಿವೆ: ಕೀಟನಾಶಕ ವಿಷಗಳ ಉತ್ಪಾದನೆಗೆ ಬೇಕಿದ್ದ ಮೂಲ ಸಂಯುಕ್ತವನ್ನು (ಮೀಥೈಲ್ ಐಸೊಸೈನೇಟ್) ಭೋಪಾಲದ ಕಾರ್ಖಾನೆ ತಯಾರಿಸುತ್ತಿತ್ತು. ಅದು ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ ಎನ್ನಿಸಿತು. ಆ ದುರಂತ ನಡೆದ 15 ವರ್ಷಗಳ ನಂತರ ಎಂಡೊಸಲ್ಫಾನ್ ದುರಂತವೂ ಕಾಸರಗೋಡಿನಲ್ಲಿ ಬೆಳಕಿಗೆ ಬಂತು. ಅದೂ ಜಗತ್ತಿನ ಅತಿ ದೊಡ್ಡ ಕೃಷಿವಿಷದ ದುರಂತ. ನಾವು ಪಾಠ ಕಲಿತೆವೆ? ಬೇರೆ ದೇಶಗಳಲ್ಲಿ ನಿಷೇಧಿಸಲಾದ 66 ಬಗೆಯ ಕೀಟವಿಷಗಳು ಈಗಲೂ ನಮ್ಮಲ್ಲಿ ಬಳಕೆಯಲ್ಲಿವೆ. ಆ 66ರ ಪೈಕಿ ಮನುಷ್ಯನಿಗೆ ಮತ್ತು ಪ್ರಾಣಿಗಳಿಗೆ ಅಪಾಯ ತರಬಲ್ಲ 27ನ್ನು ನಿಷೇಧಿಸುವ ಪ್ರಸ್ತಾವನೆಯೇನೋ ಇದೆ. ನಿಷೇಧವಾಗಿಲ್ಲ ಇನ್ನೂ. ವಿಷವಸ್ತುಗಳ ಉತ್ಪಾದಕರಿಗೆ ಒಳ್ಳೆಯದಾಗಲೆಂದು ಈ ಪ್ರಸ್ತಾವನೆಯನ್ನೇ ಆದಷ್ಟು ದುರ್ಬಲಗೊಳಿಸುವ ಮತ್ತು ನೆಪಮಟ್ಟಕ್ಕಿಳಿಸುವ ಹುನ್ನಾರ ಕಾಣುತ್ತದೆಂಬ ಟೀಕೆ ಆಗಲೇ ಬಂದಿತ್ತು. ಈಗಂತೂ ನಿಷೇಧ ಎಂದರೆ ಹಿಜಾಬ್ ನಿಷೇದ, ಧ್ವನಿವರ್ಧಕ ನಿಷೇಧದ ಚರ್ಚೆಗಳೇ ಮುನ್ನೆಲೆಗೆ ಬರುತ್ತಿವೆ ವಿನಾ ಜೀವರಕ್ಷಕ ವಿಷಯಗಳೆಲ್ಲ ಹಿನ್ನೆಲೆಗೆ ಹೋಗಿಬಿಟ್ಟಿವೆ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ
Author
Nagesh Hegde
Publisher
Bhoomi Books
Publication Year
2023
Binding
Soft Bound
Number of Pages
120
Height
10 CMS
Length
10 CMS
Width
10 CMS
Weight
100 GMS
Language
Kannada