Product Description
ದುರಾಸೆಯ ಸರ್ವತೋಮುಖ ಅಭಿವ್ಯಕ್ತಿಯಾಗಿ ಉದಯಿಸಿರುವ ಜಾಗತೀಕರಣ ದುರ್ಬಲರನ್ನು ನಿರಂತರವಾಗಿ ಅಂಚಿಗೆ ತಳ್ಳುತ್ತಲೇ ಇದೆ. ಬಡತನವೇ ಸಾಗರವಾಗಿ ಉಕ್ಕುತ್ತಿದ್ದರೂ ನಮ್ಮಂತಹ ಬಡರಾಷ್ಟ್ರಗಳು ಕೆಲವೇ ಕೆಲವು ಥಳಕು-ಬೆಳಕಿನ ಶ್ರೀಮಂತಿಕೆಯ ನಡುಗಡ್ಡೆಗಳನ್ನು ನಿರ್ಮಿಸಿಕೊಂಡು ಸಂಭ್ರಮಿಸುತ್ತಿವೆ. ಸಮಾಜದ ಎಲ್ಲಾ ಜಾತಿಯ, ಎಲ್ಲಾ ವರ್ಗಗಳ ದುರ್ಬಲರು, ಅದರಲ್ಲೂ ಮುಖ್ಯವಾಗಿ ಮಕ್ಕಳು ಮತ್ತು ಮಹಿಳೆಯರ ಪರಿಸ್ಥಿತಿ ಶೋಚನೀಯವಾಗಿದೆ. ಸಮಾಜದ ಎಲ್ಲಾ ರಂಗಗಳಲ್ಲೂ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ದಿನೇದಿನೇ ಹೆಚ್ಚುತ್ತಲೇ ಇದೆ. ಸಮಾನ ಅವಕಾಶಗಳನ್ನು ಪಡೆದು, ದೌರ್ಜನ್ಯಕ್ಕೆ ಒಳಗಾಗದೆ, ತನ್ನ ಘನತೆಯನ್ನು ಕಾಪಾಡಿಕೊಂಡು ಬದುಕಬೇಕಾದರೆ ಮಹಿಳೆ ತನ್ನನ್ನೇ ತಾನು ಈ ಬದುಕಿಗೆ ಸಿದ್ಧಪಡಿಸಿಕೊಳ್ಳಬೇಕು. ತನಗಾಗಬಹುದಾದ ಅನ್ಯಾಯಗಳನ್ನು, ದೌರ್ಜನ್ಯವನ್ನು ಮೊದಲೇ ಊಹಿಸಿ ಮಾನಸಿಕವಾಗಿ ಸನ್ನದ್ಧಳಾಗಬೇಕು. ಈ ದಿಕ್ಕಿನಲ್ಲಿ ಮಹಿಳೆಯರು ಸದೃಢವಾದ ವ್ಯಕ್ತಿತ್ವವನ್ನು ತಮಗೆ ತಾವೇ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು.