Quantity
Product Description
ಜನಸಮುದಾಯದ ಸಮಸ್ಯೆಗಳನ್ನು ವಿಶ್ಲೇಷಿಸುತ್ತ ಅನೇಕ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸುವ ಮಾದರಿಯಲ್ಲಿ ಇಲ್ಲಿನ ಲೇಖನಗಳು ಮೂಡಿಬಂದಿವೆ. ಸಾಹಿತ್ಯ, ಸಂಸ್ಕೃತಿ, ಸಮಾಜ ವಿಜ್ಞಾನ, ಆರ್ಥಿಕತೆ ಮುಂತಾದ ವಿಷಯಗಳ ಬಗ್ಗೆ ವಿಮರ್ಶಾತ್ಮಕತೆಯಿಂಧ ಕೂಡಿದ್ದು, ಚಿಂತನೆಗೆ ಹಚ್ಚುತ್ತವೆ. ವಸ್ತುನಿಷ್ಟ ಅಧ್ಯಯನ ಮಾಡಿರುವ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಕ್ರಿಯಾಶೀಲತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಯಾವುದೇ ವಿಷಯವಾದರೂ ಮೂಲಭೂತ ಪ್ರಶ್ನೆಗಳನ್ನೆತ್ತಿಕೊಂಡು ಉತ್ತರಿಸುತ್ತ ಹೋಗುವುದು ಅವರ ಜಾಯಮಾನ. ಅಸ್ಪೃಶ್ಯತೆಯನ್ನು ಧರ್ಮದ ಸೋಗಿನಲ್ಲಿ ಒಂದು ಸಮುದಾಯಕ್ಕೆ ಇರಿದ ಕೀಳರಿಮೆಯ ಅಲಗು ಎಂದು ಮೂಡ್ನಾಕೂಡು ವ್ಯಾಖ್ಯಾನಿಸುತ್ತಾರೆ. ದಲಿತ ಚಳುವಳಿ - ಹೋರಾಟಗಳು ಪುನಶ್ಚೇತನಗೊಳ್ಳಬೇಕಾದ ಅನಿವಾರ್ಯತೆಯನ್ನು ಮನುಮುಟ್ಟುವಂತೆ ವಿವರಿಸಿದ್ದಾರೆ. ಜನತೆಯನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗುಗಳಾದ ಅಜ್ಞಾನ ಮತ್ತು ಮೌಢ್ಯ ನಿವಾರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ದೃಷ್ಟಿಕೋನದ ಅಗತ್ಯವನ್ನು ಸಾರುವಂತಹ ಲೇಖನಗಳು ಇಲ್ಲಿವೆ. ಭಾರತದ ಸಂಕಷ್ಟಗಳ ಮೂಲ ಹಸಿವು ಮತ್ತು ಅವಮಾನ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಲೇಖಕರಿಗಿದೆ. ಅವರ ಜೀವಪರ ಕಾಳಜಿ, ಮಾನವೀಯತೆಯ ತುಡಿತ ಮಿಡಿತಗಳು ವ್ಯಕ್ತವಾಗಿವೆ. ಬುದ್ಧ - ಬಸವ ಅಂಬೇಡ್ಕರ್ ಚಳವಳಿಯನ್ನು ಸಮಾನತೆಯ ಸೂತ್ರದಲ್ಲಿ ಹೆಣೆದಿರುವ ರೀತಿ ಅಪೂರ್ವವಾದುದು
Author
Dr Mudnakudu Chinnaswamy
Binding
Soft Bound
Number of Pages
480
Publication Year
2018
Publisher
Kannada Pusthaka Praadhikaara
Height
3 CMS
Length
22 CMS
Weight
500 GMS
Width
14 CMS
Language
Kannada