Quantity
Product Description
Small is beautiful ಅನ್ನುತ್ತೇವೆ. ಆದರೆ, ಆ ಪುಟ್ಟದು ಚೆಂದವೆನಿಸಬೇಕಾದರೆ ಅದರಲ್ಲಿ ಘನವಾದುದು ಏನೋ ಇರಬೇಕು. ಮಹಾದೇವ ಬಸರಕೋಡರ ಈ ಕೃತಿಯ ಪ್ರತಿ ಲೇಖನವೂ ಕಿರಿದೇ, ಆದರೆ ಒಳಗಿನ ಹೂರಣ ಘನ.
ಮನಸ್ಸಿನೊಂದಿಗೆ ಮಾತಾಡುವ ಬಗೆ, ನಮ್ಮನ್ನು ನಾವು ಸಂತೈಸಿಕೊಳ್ಳುವುದು ಹೇಗೆ, ತೃಪ್ತಿ-ಅತೃಪ್ತಿಗಳ ನಡುವಣ ತಾಕಲಾಟ, ಗುಮಾನಿ ರಹಿತರಾಗಿರುವುದು, ಸಮಾಧಾನದ ಬದುಕು ಬಾಳುವ ದಾರಿ, ಅಹಂಕಾರ-ಅತಿಯಾಸೆಗಳನ್ನು ಇಲ್ಲವಾಗಿಸುವ ರೀತಿ... ಹೀಗೆ ವ್ಯಕ್ತಿತ್ವವನ್ನು ತಿದ್ದಿ ಮೆರುಗು ಕೊಡುವಂಥ ಸಾಲು ಸಾಲು ವಿಚಾರಗಳು ಇಲ್ಲಿವೆ. ಇವುಗಳನ್ನು ಅನುಸರಿಸಿದರೆ ಬದುಕಿಗೂ ಹೊಳಪು ಬಂದೀತು, ಸುತ್ತಲಿನವರಿಗೂ ಖುಷಿಯ ಪನ್ನೀರು ಸಿಂಪಡಿಸುವುದು ನಮ್ಮಿಂದ ಸಾಧ್ಯವಾದೀತು.
ಬಸರಕೋಡರ ಕ್ಯಾನ್ವಾಸ್ ಚಿಕ್ಕದೇ, ಆದರೂ ಅಲ್ಲೊಂದು ದೃಷ್ಟಾಂತವನ್ನಿಟ್ಟು ಮಾತಾಡಲು ಮರೆಯುವುದಿಲ್ಲ ಅವರು. ಹೀಗಾಗಿ ಈ ಬರಹಗಳು ಹೆಚ್ಚು ಆಪ್ತವಾಗುತ್ತವೆ ಕೂಡ. ಓದಲು ವೇಳೆಯಿಲ್ಲ ಅನ್ನುವವರ ಕಾಲವಿದು. ಆದರೆ ಈ ಕಿರು ಬರಹಗಳು ಬದುಕ ಪಾಠ ಅವಿತಿಟ್ಟ ಪುಟಾಣಿ ಗುಳಿಗೆಗಳಂತಿವೆ. ಇಲ್ಲಿ ಸೋತ ಮನಕ್ಕೆ ಸಂತೈಕೆ ಇದೆ, ಗೆಲುವಿನ ಹಾದಿ ತೋರುವ ಕೈಮರಗಳೂ ಇವೆ, ಒಳಗನ್ನು ತಿಳಿಗೊಳಿಸುವ ಸಂತನ ನುಡಿಮಾತೂ ಇದೆ.
ಇಲ್ಲಿ ಹೇಳಿರುವ ಎಲ್ಲವೂ ನಮ್ಮೊಳಗೇ ಇವೆ, ಆದರೂ ಏನೂ ಇಲ್ಲವೆಂಬಂತೆ ನಾವು ಇದ್ದೇವೆ. ಅವುಗಳನ್ನು ತೆರೆದು ತೋರುವ ಪಯಣವೇ ಈ ಪುಸ್ತಕದ ಓದು. ಇದರ ಸಾಂಗತ್ಯ ನಮ್ಮ ಆಂತರ್ಯವನ್ನು ಬೆಳಗಿಸಬಲ್ಲುದು, ಬಾಳನ್ನೂ ಸಹ. ಹೀಗಾಗಿಯೇ ಇದು ಬುದ್ಧತ್ವದ ದಾರಿ, 'ನಮ್ಮೊಳಗಿನ ಬುದ್ಧನೊಬ್ಬ' ನನ್ನು ಕಂಡುಕೊಳ್ಳುವ ತಾಣ.
Binding
Soft Bound
Author
Mahadev Basarkod
ISBN-13
9788198180049
Publication Year
2025
Number of Pages
172
Publisher
Panchami Media Publications
Height
2 CMS
Length
22 CMS
Weight
200 GMS
Width
14 CMS
Language
Kannada