Select Size
Quantity
Product Description
ಒಂದು ಉದ್ಯಾನದ ಹಲವಾರು ಹೂಗಳ ನಡುವೆ ನಮ್ಮ ಕಣ್ಣಿಗೆ ಸುಂದರವಾಗಿ ಕಂಡ ಹೂವನ್ನು ಮೆಚ್ಚುವುದು, ಅದರ ಗಿಡಕ್ಕೆ ನೀರುಣಿಸುವುದು-ಪ್ರೇಮ. ಆ ಹೂವನ್ನು ಕಿತ್ತು ನಮ್ಮ ಬಳಿ ಇಟ್ಟುಕೊಳ್ಳುವುದು-ಕಾಮ. ಅದೇ ಉದ್ಯಾನದಲ್ಲಿ ಎಲ್ಲ ಹೂಗಳೂ ಸುಂದರವಾಗಿ ಕಂಡು, ಎಲ್ಲವನ್ನೂ ಮೆಚ್ಚಿ,
ಎಲ್ಲ ಹೂಗಿಡಗಳಿಗೂ ನೀರುಣಿಸುವುದು-ಅಧ್ಯಾತ್ಮ.
* * *
ಸೃಷ್ಟಿಯ ಮೊಟ್ಟಮೊದಲ ಗಂಡು-ಹೆಣ್ಣು ಒಂದಾಗಿದ್ದು ಪ್ರೇಮದಿಂದಲೋ ಕಾಮದಿಂದಲೋ ಅನ್ನುವ ತರ್ಕಕ್ಕೆ ಸ್ಪಷ್ಟ ಉತ್ತರ ಕಷ್ಟವಾದರೂ, ಈವರೆಗಿನ ಎಲ್ಲ ವಿವರಣೆ `ಕಾಮ'ದತ್ತಲೇ ಕೊಂಡೊಯ್ಯುವುದು.
* * *
ಅದ್ವೈತ ಅಂದರೆ ಎರಡಿಲ್ಲದ್ದು. ಲೌಕಿಕದಲ್ಲಿ ಅದ್ವೈತವೆಂದರೆ,
ಇಡೀ ಸೃಷ್ಟಿಯಲ್ಲಿರುವ ಮನುಷ್ಯರೆಲ್ಲರೂ ಒಂದೇ ಅನ್ನುವ ಅರಿವು. ಮತ್ತೊಂದು ದೇಶವಿಲ್ಲ, ಮತ್ತೊಂದು ಭಾಷೆಯಿಲ್ಲ. ಮತ್ತೊಂದು ಕುಲವಿಲ್ಲ. ಮತ್ತೊಂದು ಜಾತಿ ಇಲ್ಲ, ಮತ್ತೊಂದು ಲಿಂಗವಿಲ್ಲ, ಇರುವ ಎಲ್ಲ ದೇಶ, ಭಾಷೆ, ಕುಲ, ಜಾತಿ, ಲಿಂಗವೂ ನನ್ನದು, ಪ್ರತಿಯೊಂದೂ ನನಗೆ ಸಂಬಂಧಿಸಿದ್ದು ಅನ್ನುವ ಜ್ಞಾನ. ಈ ಜ್ಞಾನೋದಯ ಸಾಧ್ಯವಾಗುವುದು ಪ್ರೀತಿಯಿಂದ.
Author
Chetana Tirthahalli
Binding
Soft Bound
ISBN-13
9789393224811
Number of Pages
168
Publisher
Sawanna Enterprises
Height
1 CMS
Length
10 CMS
Weight
300 GMS
Width
10 CMS
Language
Kannada