Select Size
Quantity
Product Description
ಈ ಕೃತಿಯಲ್ಲಿ ಒಟ್ಟು ೭೧೩ ಪದ್ಯಗಳಿವೆ. ಮೂಲ ತೆಲುಗು ಪದ್ಯಗಳನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಪ್ರತಿ ಪದ್ಯವನ್ನೂ ಕನ್ನಡಕ್ಕೆ ಭಾಷಾಂತರಿಸಿ ಅದಕ್ಕೆ ತಾತ್ಪರ್ಯವನ್ನು ನೀಡಲಾಗಿದೆ. ಈ ಕ್ರಮದ ಬರವಣಿಗೆಯಿಂದ ಪಂಡಿತರು ಈ ಭಾಷಾಂತರವನ್ನು ಒರೆಗಲ್ಲಿಗೆ ಹಚ್ಚಲು, ತಾತ್ಪರ್ಯದ ಸಮರ್ಥತೆ ಯನ್ನು ತಿಳಿಯುವುದಕ್ಕೂ, ಸಾಮಾನ್ಯರು ಓದಿ ಸುಲಭವಾಗಿ ಅರ್ಥಗ್ರಹಿಸಿ ವೇದಾಂತ ಸಾಮ್ರಾಜ್ಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಳ್ಳುವುದಕ್ಕೂ ಏಳನೇ ಮತವೆನಿಸಿದ ಯೋಗಿ ಮತದ ಪ್ರವೇಶಕ್ಕೂ ಅನುಕೂಲವಾಗಿದೆ.
ಮೂಲ ಪದ್ಯಗಳ ಛಂದಸ್ಸಿನಲ್ಲಿಯೇ ಕನ್ನಡಾನುವಾದ ಮಾಡಲಾಗಿದೆ. ತಾತ್ಪರ್ಯವನ್ನೂ ಬರೆದು ಸಹೃದಯ ಓದುಗರು ಮೂಲದ ಅಂತರಾರ್ಥವನ್ನು ತಿಳಿಯಲು ಅನುಕೂಲ ಮಾಡಲಾಗಿದೆ. ಪಂಡಿತರು ಈ ಭಾಷಾಂತರದ ಗುಣಮಟ್ಟವನ್ನು ಪರಿಶೀಲಿಸುವಾಗ ಕಂಡುಬರುವ ಅರೆಕೊರೆಗಳನ್ನು ಮನ್ನಿಸಿ. ಮೂಲದ ಇಂಗಿತವನ್ನು ಗ್ರಹಿಸಬೇಕೆಂದು ವಿನಂತಿಸುತ್ತೇನೆ.
ಕರುನಾಡ ಕನ್ನಡ ಕಲಿಗಳು, ಕೈವಾರ ನಾರೇಯಣ ಯತೀಂದ್ರರ ಬೋಧೆಯನ್ನು ಓದಿ ಆಧ್ಯಾತ್ಮ ಲೋಕದಲ್ಲಿ ಸಂಚರಿಸಿ ಸಂತುಷ್ಟಿ ಪಡೆಯುವುದರಲ್ಲಿ ಸಂಶಯವಿಲ್ಲ.
Weight
400 GMS
Length
22 CMS
Width
14 CMS
Height
4 CMS
Author
M Devara Kondappa
Publisher
Sapna Book House Pvt Ltd
Publication Year
2023
Number of Pages
396
ISBN-13
9789354567858
Binding
Soft Bound
Language
Kannada