Quantity
Product Description
Ee Hanakasu Tappugalannu Neevu Madabedi : A book on common financial mistakes
ರಂಗಸ್ವಾಮಿ ಮೂಕನಹಳ್ಳಿ ತುಮಕೂರು ಜಿಲ್ಲೆಯ ಸಿರಾದಲ್ಲಿ 18.05.1975ರಂದು ಜನನ. ಪ್ರಾಥಮಿಕ ಶಿಕ್ಷಣ ಸಿರಾ ತಾಲೂಕಿನ ಹೊಸೂರು ಎನ್ನುವ ಗ್ರಾಮದಲ್ಲಿ ಆಗುತ್ತದೆ. ಮಾಧ್ಯಮಿಕ ಶಿಕ್ಷಣ ಬೆಂಗಳೂರಿನ ಪೀಣ್ಯದಲ್ಲಿನ ಸರಕಾರಿ ಶಾಲೆಯಲ್ಲಿ, ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ. ನಂತರ ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಓದಿ ಬೆಂಗಳೂರು ಯೂನಿವರ್ಸಿಟಿಯಿಂದ ಕಾಮರ್ಸ್ ಪದವಿ ಪಡೆಯುತ್ತಾರೆ. 23ನೆಯ ವಯಸ್ಸಿಗೆ ಕೆಲಸದ ಮೇಲೆ ದೇಶವನ್ನ ತೊರೆದು ದುಬೈ ಸೇರುತ್ತಾರೆ. ದುಬೈನಲ್ಲಿ ಮೂರು ತಿಂಗಳ ಕೆಲಸದ ನಂತರ ಸ್ಪೇನ್ ದೇಶದ ಬಾರ್ಸಿಲೋನಾ ನಗರ 2017ರವರೆಗೆ ಇವರ ಮನೆಯಾಗುತ್ತದೆ. ಈ ಮಧ್ಯೆ 2001ರಲ್ಲಿ ಇಂಗ್ಲೆಂಡ್ನ ಇನ್ಸ್ಟಿಟ್ಯೂಟ್ ಆಫ್ ಇಂಟರ್ನಲ್ ಆಡಿಟರ್ಸ್ ಸಂಸ್ಥೆಯ ಮೂಲಕ ಸರ್ಟಿಫೈಡ್ ಇಂಟರ್ನಲ್ ಆಡಿಟರ್ ಪದವಿಯನ್ನ ಪಡೆಯುತ್ತಾರೆ. ಇದರ ಜೊತೆಗೆ ಸರ್ಟಿಫೈಡ್ SAP FICO ಕನ್ಸಲ್ಟೆಂಟ್ ಮತ್ತು ಫೈನಾನ್ಸಿಯಲ್ ಕನ್ಸಲ್ಟೆಂಟ್ ಕೂಡ ಆಗಿದ್ದಾರೆ. ಶ್ರೀಯುತರು ವೃತ್ತಿ ಹಾಗೂ ಪ್ರವೃತ್ತಿಯ ಸಲುವಾಗಿ ಇಲ್ಲಿಯವರೆಗೆ ಅರವತ್ತಕ್ಕೂ ಹೆಚ್ಚು ದೇಶಗಳನ್ನ ಸುತ್ತಿದ್ದಾರೆ. ದೂರದರ್ಶನ, ಆಲ್ ಇಂಡಿಯಾ ರೇಡಿಯೋ, ಎ್ಎಂಗಳು, ಕಾಲೇಜು ಮತ್ತು ಬಿಸಿನೆಸ್ ಸ್ಕೂಲ್ಗಳಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಹಲವಾರು ಉಪನ್ಯಾಸಗಳನ್ನ ಶ್ರೀಯುತರು ನೀಡಿದ್ದಾರೆ. ಸಾವಣ್ಣ ಪ್ರಕಾಶನದ `ಷೇರು ಸಾಮ್ರಾಜ್ಯ ಕಲಿತವನೇ ಅಧಿಪತಿ' ಪುಸ್ತಕದಲ್ಲಿನ ಒಂದು ಲೇಖನ `ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನ' ಮೈಸೂರು ಯೂವರ್ಸಿಟಿ ಮತ್ತು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕುವೆಂಪು ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಕೂಡ ಆಯ್ಕೆಯಾಗಿದೆ. ಇಲ್ಲಿಯವರೆಗೆ 1200ಕ್ಕೂ ಹೆಚ್ಚು ಪ್ರಕಟಿತ ಬರಹಗಳು ಇವರ ಹೆಸರಿನಲ್ಲಿದೆ ಹಾಗೂ 29 ಕೃತಿಗಳನ್ನು ರಚಿಸಿದ್ದಾರೆ. ಸದ್ಯಕ್ಕೆ ಮೈಸೂರಿನಲ್ಲಿ ವಾಸವಿದ್ದಾರೆ.
Author
Rangaswamy Mookanahalli
Binding
Soft Bound
Number of Pages
200
Publication Year
2025
Publisher
Sawanna Enterprises
Height
3 CMS
Length
22 CMS
Weight
500 GMS
Width
14 CMS
Language
Kannada