Product Description
ನಮ್ಮ ಮನಸ್ಸು ಎಲ್ಲಿದೆ, ಹೇಗಿದೆ? ಅದರ ರಚನೆ, ಬೆಳವಣಿಗೆ ಹೇಗೆ? ಅದು ಹೇಗೆ ಕೆಲಸ ಮಾಡುತ್ತದೆ? ಕೆಲವರ ಮನೋಸಾಮರ್ಥ್ಯ ಹೆಚ್ಚು. ಕೆಲವರ ಮನೋಸಾಮರ್ಥ್ಯ ಕಡಿಮೆ - ಏಕೆ? ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಡುವುದು ಹೇಗೆ? ಮನಸ್ಸಿನ ಏಕಾಗ್ರತೆ, ನೆನಪಿನ ಶಕ್ತಿ, ವಿವೇಚನೆ, ಸಹನಾಶಕ್ತಿಯನ್ನು ಹೆಚ್ಚಿಸುವುದು ಹೇಗೆ? ಮನಸ್ಸಿಗೆ ಬರುವ ಕಾಯಿಲೆಗಳಾವುವು? ಅವುಗಳ ಲಕ್ಷಣಗಳೇನು ? ಪರಿಹಾರವೇನು ? ಮನಸ್ಸು ದಾರಿ ತಪ್ಪಿ, ಅಪರಾಧ ಮಾಡುವುದು ಏಕೆ ? ಮನಸ್ಸು - ಆತ್ಮದ ಸಂಬಂಧವೇನು ? ಸತ್ತ ಮೇಲೆ ಆತ್ಮ ಇದೆಯೇ ? ಅದು ಮತ್ತೊಂದು ಜನ್ಮವನ್ನು ಪಡೆಯುತ್ತದೆಯೇ, ಅಥವಾ ಅಂತರ ಪಿಶಾಚಿಯಾಗುತ್ತದೆಯೇ ? ದೆವ್ವ ಭೂತಗಳು ನಿಜವೇ, ನಮ್ಮ ಮನಸ್ಸಿನ ಕಲ್ಪನೆಗಳೇ ? ಎಷ್ಟೊಂದು ಪ್ರಶ್ನೆಗಳು! ಇವಕ್ಕೆ ಉತ್ತರ, ಈ ಹೊತ್ತಿಗೆಯಲ್ಲಿ. ತಡವೇಕೆ ಇಂದೇ ಕೊಳ್ಳಿರಿ.