Product Description
ಅಸ್ಗರ್ ವಜಾಹತ್ ಅವರ ನಾಟಕ ‘ಗಾಂಧಿಗೆ ಸಾವಿಲ್ಲ’ದಲ್ಲಿ ಗಾಂಧಿ ಗೋಡಸೆಯ ಗುಂಡಿಗೆ ಬಲಿಯಾಗಿ ಹುತಾತ್ಮರಾಗುವುದಿಲ್ಲ, ಆದರೆ ಬದುಕಿ ಉಳಿಯುತ್ತಾರೆ. ನಂತರ ಗಾಂಧಿ ಮತ್ತು ಗೋಡಸೆ ನಡುವೆ ಸಂವಾದ ಏರ್ಪಡುತ್ತದೆ. ನಾಟಕದಲ್ಲಿ ಪ್ಯಾರೇಲಾಲ್, ಜವಾಹರಲಾಲ್ ನೆಹರೂ, ಸರದಾರ್ ಪಟೇಲ್, ಮೌಲಾನಾ ಆಚಾದ್ ಮತ್ತು ನಾನಾ ಆಪ್ಟೆ ಮುಂತಾದ ಪಾತ್ರಗಳು ಚಿರಪರಿಚಿತ ಪಾತ್ರಗಳೇ ಆಗಿ ಮೂಡಿ ಬಂದಿವೆ.
ಈ ನಾಟಕದಲ್ಲಿ ಗಾಂಧಿ ಸತ್ಯ, ಅಹಿಂಸೆ, ಅಧಿಕಾರ, ಸೇವೆ, ಜನಶಕ್ತಿ ಕುರಿತು ಸಹ ಹೊಸದಾಗಿ ವ್ಯಾಖ್ಯೆ ಮಾಡುತ್ತಾರೆ. ಫಣೀಶ್ವರನಾಥ ರೇಣು ಅವರ ಒಂದು ಪಾತ್ರ ‘ಬಾವನ್ದಾಸ್’ನ ಪರಿಕಲ್ಪನೆ ಸಹ ಅಧಿಕಾರ ಕುರಿತ ಜನತೆಯ ದೃಷ್ಟಿಕೋನವನ್ನು ಸಂಕೇತಿಸುತ್ತದೆ.
ಇಂದು ಎಲ್ಲೆಲ್ಲೂ ನಮ್ಮನ್ನು ಮುಖಾಮುಖಿಯಾಗುತ್ತಿರುವ ಪ್ರಶ್ನೆಗಳನ್ನು ಮೊದಲೇ ಅಸ್ಗರ್ ವಜಾಹತ್ ತಮ್ಮ ನಾಟಕದಲ್ಲಿ ಎತ್ತಿದ್ದಾರೆ. ಇಂಥ ಕೃತಿಗಳು ಲೇಖಕನ ಒಳನೋಟಕ್ಕೆ ಸಾಕ್ಷಿಯಾಗುತ್ತವೆ. ಭವಿಷ್ಯದ ಆಗುಹೋಗುಗಳ ಸುಳಿವನ್ನು ನೀಡಬಲ್ಲ ಸಾಮರ್ಥ್ಯವನ್ನು ಸಹ ಈ ಕೃತಿಗಳು ಋಜುವಾತು ಪಡಿಸುತ್ತವೆ.