Quantity
Product Description
ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಾಂಸಾರಿಕ, ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ, ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ. ఇంగ్లీషో ಸಾಹಿತ್ಯದಲ್ಲಿ ಇರಬಹುದಾದ ಇಂಥ ಕಥಾನಕಗಳು. ಕನ್ನಡದಲ್ಲಿ ಅಪರೂಪ.
ಎಸ್ಟೇಟ್ ಮಧ್ಯದ ಸಿರಿವಂತರ ಬದುಕಿನ ನಿಗೂಢ ಘಟನೆಯೊಂದನ್ನು ನಾದಾ ಅವರು ರೋಚಕವಾಗಿ ಹೆಣೆದಿದ್ದಾರೆ. ಎಸ್ಟೇಟು ಬಂಗಲೆಯಲ್ಲಿ ನಡೆಯುವ ಈ ಕಥೆಯು ಪ್ರೀತಿ, ದ್ವೇಷ, ಅಸೂಯೆ. ವಂಚನೆ ಮುಂತಾದ ಹಲವು ಭಾವಗಳ ಸಮ್ಮಿಲನವಾಗಿದೆ. ವಿನಾಕಾರಣ ಕೊಲೆಯಾಗುವ ಓರ್ವ ಅಮಾಯಕ ಹೆಣ್ಣಿನ ಮನಸ್ಸನ್ನು ಅರ್ಥೈಸಲಾಗದೆ ಆಕೆಯ ಭಾವನೆಗಳ ಮೌಲ್ಯವನ್ನು ತಿಪ್ಪೆಗೆಸೆಯುವ ಕ್ರೌರ್ಯ ತಮ್ಮ ಜನ್ಮಸಿದ್ದ ಹಕ್ಕು ಎಂಬಂತೆ ವರ್ತಿಸುವ ಪುರುಷ ಸಮಾಜವನ್ನು ಈ ಕಾದಂಬರಿ ನಿಕಷಕ್ಕೊಡುತ್ತದೆ. ಕೊಡಗಿನ ಪ್ರಾಕೃತಿಕ ರಮಣೀಯತೆ ಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವುದು ಈ ಕಾದಂಬರಿಯ ಮತ್ತೊಂದು ವಿಶೇಷ ಕರಾವಳಿ ತೀರದ ನಾದಾ ಅವರ ಈ ಕಾದಂಬರಿ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅನುಪಮ ಕೊಡುಗೆ.
Author
Dr N Damodar Shetty
Binding
Soft Bound
Publisher
Ankitha Pusthaka
Publication Year
2025
Number of Pages
120
Height
1 CMS
Weight
200 GMS
Width
14 CMS
Length
22 CMS
Language
Kannada