ಮಗು ಸುತ್ತಲಿನ ಪರಿಸರವನ್ನು ನೋಡಿ, ಅನುಸರಿಸಿ ಮಾತು ಕಲಿಯುತ್ತದೆ. ಮಾತಿನಿಂದ ಪ್ರೀತಿ, ಮಾತಿನಿಂದ ಧೈರ್ಯ ಮೂಡುತ್ತದೆ. ವಕೀಲ, ವೈದ್ಯ, ಶಿಕ್ಷಕ, ವ್ಯಾಪಾರಿ - ಎಲ್ಲರಿಗೂ ಮಾತೇ ಬಂಡವಾಳ. ನಟ ನಟಿ, ನಿರ್ವಾಹಕ, ವಕೀಲ, ಮಾರಾಟಗಾರ, ನಿರ್ದೇಶಕ - ಇವರಿಗೂ ಮಾತು ದೊಡ್ಡ ಬಂಡವಾಳ. ಒಳ್ಳೆಯ ಮಾತುಗಾರಿಕೆ ಯಶಸ್ಸಿನ ಮೂಲ. ವಿಮರ್ಶೆ: ಮಕ್ಕಳೊಂದಿಗೆ ಮಾತುಕತೆ, ವೇದಿಕೆಯ ಮೇಲೆ, ಮಾತೇ ಮಾಧ್ಯಮವಾದ ಉದ್ಯೋಗಿಗಳು.. ಮುಂತಾದ ಲೇಖನಗಳು ಗಮನ ಸೆಳೆಯುತ್ತವೆ.
ಮಲ್ಲ ಕರ್ನಾಟಕ ೧೫-೦೫-೨೦೦೭.
ಒಳ್ಳೆಯ ಮಾತುಗಾರರು ಅನುಸರಿಸಬೇಕಾದುದೇನು ಎಂಬುದನ್ನು ಈ ಪುಸ್ತಕ ಸರಳ ಶೈಲಿಯಲ್ಲಿ ತಿಳಿಸಿಕೊಡುತ್ತದೆ.