ಸಾಹಿತ್ಯ ಜಗತ್ತಿನಲ್ಲಿ ಮಹಾಕವಿಗಳ, ಮಹಾವಿದ್ವಾಂಸರ ಚಿರಕೃತಿಗಳಿಂದ ಸ್ಮರಣೀಯಸೂಕ್ತಿಗಳನ್ನು ಆಯ್ದು ಸೊಗಸಾದ ಸಂಪುಟಗಳ ರೂಪದಲ್ಲಿ ಸಹೃದಯರಿಗೆ ಸಂಗ್ರಹಿಸಿಕೊಡುವುದು ನಿಡುಗಾಲದಿಂದ ನಡೆದುಬಂದ ಪರಿಪಾಟಿಯೇ ಆಗಿದೆ. ಈ ಜಾಡಿನಲ್ಲಿಯೇ ನಮ್ಮ ದೇಶದ ಹೆಮ್ಮೆಯ ಲೇಖಕರಾದ ಡಾ|| ಎಸ್.ಎಲ್. ಭೈರಪ್ಪನವರ ಕಾದಂಬರಿಗಳಿಂದ ಆಯ್ದ ಸೂಕ್ತಿಗಳ ಸಂಗ್ರಹವೇ ಈ ಪುಸ್ತಕ.