Product Description
ಮಧ್ಯಕಾಲೀನ ಯೂರೋಪಿನಲ್ಲಿ ಚರ್ಚಿನ ಅಗಾಧ ಹಿಡಿತವು ಕರಾಳ ಕೃತ್ಯಗಳಿಗೆ ಎಡೆಮಾಡಿಕೊಟ್ಟಿತ್ತು. ಗೆಲಿಲಿಯೊ, ಬ್ರೂನೊ, ಡೇಕಾರ್ಟ್, ಮುಂತಾದವರು ಅನುಭವಿಸಿದ ಉಪಟಳವು ಅದರ ಪರಿಣಾಮ. ವಿಜ್ಞಾನಿಗಳು ಮತ್ತು ತತ್ತ್ವಶಾಸ್ತ್ರಜ್ಞರು ಅದರಿಂದ ಕಂಗಾಲಾಗಲಿಲ್ಲ. ಬದಲಾಗಿ, ಯೂರೋಪಿನಲ್ಲಿ ಪುನರುಜ್ಜೀವದ ಶಕೆ ಆರಂಭಗೊಂಡಿತು. 16ನೆಯ ಶತಮಾನದ ಬೇಕನ್ನಿಂದ ಹಿಡಿದು 19ನೆಯ ಶತಮಾನದ ಮಾರ್ಕ್ಸ್ನವರೆಗೆ ಸತತವಾಗಿ ತತ್ತ್ವಶಾಸ್ತ್ರದ ಕ್ಷೇತ್ರದಲ್ಲಿ ಹಲವು ವಿಕಾಸಶೀಲ ಪ್ರಕ್ರಿಯೆಗಳ ಜೊತೆಜೊತೆಯಲ್ಲಿ ಸಾಗಿತು. ಎರಡೂ ಕ್ಷೇತ್ರಗಳಲ್ಲಿ ಅಪರಿಮಿತ ಉತ್ಸಾಹ ಮತ್ತು ನಿರಂತರ ಬೆಳವಣಿಗೆ ಕಂಡುಬಂದವು. ಯೂರೋಪಿನ ಇತಿಹಾಸದಲ್ಲಿ ಅತಿಮುಖ್ಯವಾದ ಘಟ್ಟ ಇದು.
ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಯೂರೋಪಿನ ಈ ಮೂರು ಪ್ರಮುಖ ಶತಮಾನಗಳ ತತ್ತ್ವಶಾಸ್ತ್ರದ ಚಿಂತನೆಗಳನ್ನು ಸಾರವತ್ತಾಗಿ ಮತ್ತು ಸರಳವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಷ್ಟು ಸಮಗ್ರವಾದ ನಿರೂಪಣೆಗಳಿರುವ ಪುಟ್ಟ ಗ್ರಂಥ ಇನ್ನೊಂದಿರಲಾರದು. ಕನ್ನಡದಲ್ಲಿ ಇದೇ ಈ ಮಾದರಿಯ ಮೊದಲ ಗ್ರಂಥವೆನ್ನಬಹುದು.
ಅನುವಾದಕ ನಗರಗೆರೆ ರಮೇಶ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಾಚಾರ್ಯರಾಗಿದ್ದವರು, ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು, ನುರಿತ ಭಾಷಾಂತರಕಾರರು ಮತ್ತು ಲೇಖಕರು. ಲೇಖಕ ಮತ್ತು ಅನುವಾದಕ ಇಬ್ಬರೂ ತತ್ತ್ವಶಾಸ್ತ್ರವನ್ನು ಸಮಾಜದ ಬದಲಾವಣೆಗೆ ಒಂದು ಸಾಧನವೆಂದು ಅರಿವು ಹಲವು ಕಾರ್ಯಕ್ಷೇತ್ರಗಳಲ್ಲಿ ಸಕ್ರಿಯರು.
ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತತ್ತ್ವಶಾಸ್ತ್ರವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡವರಿಗೆ ಅತ್ಯಂತ ಉಪಯುಕ್ತ ಕೈಪಿಡಿ ಇದೆಂದು ಗುರುತಿಸಲಾಗಿದೆ. ಇಂಗ್ಲಿಷ್ನ ಮೂಲಕೃತಿಯನ್ನು ಬಳಸಿದವರ ಈ ತಿಳಿವನ್ನು ಅನುವಾದಿತ ಪುಸ್ತಕವನ್ನು ಬಳಸುವವರು ಸಹ ಮಾನ್ಯ ಮಾಡುತ್ತಾರೆಂಬ ಭರವಸೆಯುಳ್ಳ ಗ್ರಂಥ "ಬೇಕನ್ನಿಂದ ಮಾರ್ಕ್ಸ್ನವರೆಗೆ."