Product Description
‘ಬಸಿರು’ ಕೃತಿಯ ಈ ಪರಿಷ್ಕೃತ ಆವೃತ್ತಿಯನ್ನು ಹೊಸ ವಿಷಯಗಳನ್ನು ಸೇರಿಸಿ ನರ್ಸಿಂಗ್ (ಶುಶ್ರೂಷೆ) ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ರೂಪದಲ್ಲಿ ತಂದಿರುತ್ತಾರೆ. ಕನ್ನಡ ಭಾಷೆಯಲ್ಲಿ ಅತ್ಯಂತ ಸರಳವಾಗಿ ಬರೆದು ಕನ್ನಡವನ್ನು ಹೆಚ್ಚಾಗಿ ಬಲ್ಲದೆ ಇರುವ ಎಲ್ಲ ನರ್ಸಿಂಗ್ ವಿದ್ಯಾರ್ಥಿಗಳಿಗೂ ಸುಲಭವಾಗಿ ತಿಳಿಯುವಂತೆ ಬರೆದಿದ್ದಾರೆ. ಗ್ರಾಮಾಂತರ ಪದೇಶಗಳಲ್ಲಿರುವ ಮಹಿಳೆಯರ ಸಾವು, ನೋವು ಮತ್ತಿತರ ವೈದ್ಯಕೀಯ ಸಂಕಷ್ಟಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಅಂತಹ ಪ್ರದೇಶಗಳಲ್ಲಿ ವಿಶೇಷ ಸೌಲಭ್ಯಗಳಿಲ್ಲದ ಬಹಳ ಕಷ್ಟಕರ ರೀತಿಯಲ್ಲಿ ಕೆಲಸ ಮಾಡುತ್ತಿರುವ ದಾದಿಯರಿಗೆ ಅನುವಾಗಲು ಹಾಗೂ ಹೆಚ್ಚಿನ ಜ್ಞಾನ ಮೂಡಿಸಲು ಈ ಪುಸ್ತಕವನ್ನು ಬರೆಯಲಾಗಿದೆ.