Select Size
Quantity
Product Description
ಬಡತನವನ್ನು ಎದುರಿಸಿ ಗೆದ್ದ ಸಾಧಕರಿಗೆ ನನ್ನ ನಲ್ಮೆಯ ಮಾತು. ಸಾಧಕರ ಜೀವನ ಚರಿತ್ರೆಯನ್ನು ಓದಿದ ಹಲವರಿಗೆ, ಈ ಸಾಧಕರು ಸ್ಫೂರ್ತಿಯಾಗುತ್ತಾರೆ. ಆದರ್ಶದ ಜ್ಯೋತಿ ಆಗುತ್ತಾರೆ, ಜ್ಯೋತಿಯ ಬೆಳಕಿನಲ್ಲಿ ಕಾಣುವ ಮಾರ್ಗದಲ್ಲಿ ತಾವೂ ನಡೆಯಲು ಪ್ರಯತ್ನಿಸುತ್ತಾರೆ. ಬಡತನ ಸಂಕಷ್ಟಗಳು ಭಗವಂತನ ಶಾಲೆಯಲ್ಲಿ ಅವನಿಟ್ಟ ಒಂದು ಪರೀಕ್ಷೆ ಅದರಲ್ಲಿ ಪೂರ್ತಿ ಅಂಕಗಳೊಂದಿಗೆ ತೇರ್ಗಡೆಯಾದ ಸಾಧಕರ ಹೆಸರು ಅಜರಾಮರವಾಗಿ ನಿಲ್ಲುತ್ತದೆ. 84 ಲಕ್ಷ ಜನ್ಮಗಳನ್ನು ದಾಟಿ ಶ್ರೇಷ್ಠವಾದ ಮಾನವ ಜನ್ಮಕ್ಕೆ ಕಾಲಿರಿಸಿದ ನಮಗೆ ಬಡತನ, ಕಷ್ಟಗಳನ್ನು ಒಂದು ವರವಾಗಿ ಕೊಟ್ಟಿದ್ದಾನೆ ಭಗವಂತ. ಬಡತನ, ಸಂಕಷ್ಟಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡ ನಮಗೆ ಪ್ರಪಂಚದ ನಾನಾ ವಿಚಾರಗಳು ಅರ್ಥವಾಗುತ್ತವೆ ನಾನಾ ಮನುಷ್ಯರ ಪರಿಚಯ ಆಗುತ್ತದೆ. ತಾಯಿ-ತಂದೆ ಬಂಧು ಬಳಗ, ಯಾರನ್ನು ನಂಬಬೇಕು ಬಿಡಬೇಕು, ಸ್ನೇಹಿತರು, ಮಕ್ಕಳು, ಗಂಡ ಹೆಂಡತಿ, ಎನ್ನುವ ಪಾತ್ರಗಳ ಪರಿಚಯವಾಗುತ್ತದೆ. ಇವೆಲ್ಲದರ ಮಧ್ಯೆ ನಮ್ಮ ಸಾಧನೆಯ ಬದುಕು ಸ್ವಾಭಿಮಾನದಿಂದ ನಿಸ್ವಾರ್ಥತೆಯಿಂದ ಪುಟಕ್ಕಿಟ್ಟ ಚಿನ್ನವಾಗುತ್ತದೆ. ನಾವು ಬಡವರು, ಕಷ್ಟಜೀವಿಗಳು ಎಂಬ ಭಾವನೆ ಸಲ್ಲದು. ಭಗವಂತನ ಪರೀಕ್ಷೆಗೆ ಒಳಪಟ್ಟಿರುವ ನಾವು ನಿಜಕ್ಕೂ ಧನ್ಯರು, ಮಾನ್ಯರು. ಈ ದಿಸೆಯಲ್ಲಿ ಇಂತಹ ಹಲವು ಸಾಧಕರನ್ನು ಪರಿಚಯಿಸುವ ಸ್ತುತ್ಯ ಕಾರ್ಯ ಮಾಡಿರುವ ಲೇಖಕರಾದ ಡಾ.ಶ್ರೀನಿವಾಸ ಪ್ರಸಾದ್ ಅವರಿಗೂ, ಈ ಕೃತಿಯನ್ನು ಪ್ರಕಟಿಸುತ್ತಿರುವ ವೀರಲೋಕ ಪ್ರಕಾಶನ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರಿಗೂ ಶುಭಾಶಯ. ಒಳ್ಳೆಯದಾಗಲಿ.
-ಶ್ರೀಮತಿ ಕಸ್ತೂರಿ ಶಂಕರ್
ಪ್ರಖ್ಯಾತ ಗಾಯಕಿ, ಬೆಂಗಳೂರು
Binding
Soft Bound
Author
D S Shrinivas Prasad
ISBN-13
978948355720
Number of Pages
248
Publisher
Veeraloka Books Pvt Ltd
Publication Year
2024
Height
1 CMS
Length
22 CMS
Weight
400 GMS
Language
Kannada