Quantity
Product Description
ಎಲ್ಲರೂ ಇಂದು ಸಾವಧಾನತೆಯ ಹಾಗೂ ನಮ್ಮ ಮೇಲೆ ನಾವು ಹೂಡಿಕೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಮಾತನಾಡುತ್ತಿದ್ದಾರೆ. `ಒತ್ತಡ ಮುಕ್ತ ಜೀವನಕ್ಕೆ 101 ಮ್ಯಾಜಿಕ್ ಮಂತ್ರಗಳು ಇಲ್ಲಿನ ಪ್ರತಿ ಮ್ಯಾಜಿಕ್ ಮಂತ್ರಗಳು ಮನಸ್ಸನ್ನು ಹೇಗೆ ಉಪಯೋಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವುದು ಎಂಬ ತುಡಿತದ ರೂಪಕಗಳೇ ಆಗಿವೆ.
ಪುಸ್ತಕದ ಪ್ರತೀ ಲೇಖನಗಳು ಮಾನಸಿಕ ಸ್ವಯಂ-ಆರೈಕೆ ಜೊತೆಗೆ ದೇಹ ಹಾಗೂ ಮನಸ್ಸನ್ನು ಉತ್ತೇಜಿಸುವ ಸೃಜನಾತ್ಮಕ ಜೀವನ ಶೈಲಿಯ ರಚನೆಯ ಕುರಿತಾಗಿ ಮಾತನಾಡುತ್ತಾ ಹೋಗುತ್ತವೆ.
ಸಂವೇದನೆಗಳನ್ನು, ಆಲೋಚನೆಗಳನ್ನು ಈ ಕ್ಷಣದ ತುರ್ತಿಗೆ ಅಂಗೀಕರಿಸುತ್ತ, ಶಾಂತಗೊಳಿಸುತ್ತಾ, ನಿಭಾಯಿಸುತ್ತಾ ಆ ಮೂಲಕ ಬದುಕಿನ ದೀರ್ಘಕಾಲಿಕ ಮಾನಸಿಕ ಸುಸ್ಥಿರತೆಯಾಗಿ ಬದಲಾಯಿಸುವ ಮಾಂತ್ರಿಕ ಮಿಡಿತಗಳನ್ನು ಇಲ್ಲಿನ ಪ್ರತಿ ಅಕ್ಷರಗಳಲ್ಲೂ ಕಾಣಬಹುದಾಗಿದೆ.
ಇಲ್ಲಿರುವ 101 ಮ್ಯಾಜಿಕ್ ಮಂತ್ರಗಳು ಪ್ರತಿಧ್ವನಿಸುವುದು `ನಿಮ್ಮ ಮನಸ್ಸಿನ ನಾಯಕ/ನಾಯಕಿ ನೀವೇ ಎಂಬ ಘೋಷಣೆಯೊಂದನ್ನೇ.'
ದೇಹ-ಮನಸ್ಸು-ಮೆದುಳಿನ ಸೂಕ್ಷ್ಮಗಳನ್ನು ಅರಿಯುವ ಅಗತ್ಯವಾದ ಹೊಳಹುಗಳು ಇಲ್ಲಿನ ಪ್ರತಿ ಲೇಖನಗಳಲ್ಲೂ ಕೂಡಿವೆ. ಪುಸ್ತಕ ನಿಮ್ಮಲ್ಲೂ ಮ್ಯಾಜಿಕ್ ಮೂಡಿಸುತ್ತದೆ ಎಂಬ ನಂಬಿಕೆಯೊಂದಿಗೆ...
Author
Dr B C Shwetha
Binding
Soft Bound
Number of Pages
120
Publication Year
2025
Publisher
Sawanna Enterprises
ISBN-13
9788198837738
Height
2 CMS
Length
22 CMS
Weight
200 GMS
Width
14 CMS
Language
Kannada