Quantity
Product Description
ಅಂಬೇಡ್ಕರ್ ಹೆಸರಿನ ಬದಲು ದೈವದ ಸ್ಮರಣೆ ಮಾಡಿದರೆ ಸೌಭಾಗ್ಯ ಕೂಡಿಬರಲಾರದು. ಕಾಣದ ದೈವಕ್ಕಿಂತ ಕೈಹಿಡಿದು ನಡೆಸುವ ಧೀಮಂತ ನಾಯಕ ಮತ್ತು ಆದರ್ಶ ಮೌಲ್ಯಗಳ ಸಾಕಾರಮೂರ್ತಿ ಬಾಬಾ ಸಾಹೇಬರು. ಅವರನ್ನು ಪರಿಚಯಿಸುವ ಗ್ರಂಥಗಳ ಮಹಾಪೂರಕ್ಕೆ ಈಗಾಗಲೇ ಸಾರವತ್ತಾಗಿ ನೆಲ್ಸನ್ ಮಂಡೇಲಾ ಜೀವನ ಚರಿತ್ರೆಯನ್ನು ನೀಡಿರುವ ಡಾ. ಎಂ. ವೆಂಕಟಸ್ವಾಮಿಯವರ ನೂತನ ಮೌಲಿಕ ಕೃತಿಯ ಸೇರ್ಪಡೆಯಾಗುತ್ತಿದೆ. ನಮ್ಮ ಸಾಂಸ್ಕೃತಿಕ - ಆರ್ಥಿಕ - ಸಾಮಾಜಿಕ ಸವಾಲುಗಳನ್ನೆದುರಿಸಲು ಡಾ. ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟಗಳನ್ನು ವಿಹಂಗಮ ಶೈಲಿಯಲ್ಲಿ ಪ್ರಸ್ತುತ ಕೃತಿಯು ಕಟ್ಟಿಕೊಡುತ್ತದೆ. ಬಾಬಾ ಸಾಹೇಬರ ಜೀವನ, ಹೋರಾಟ, ವಿದ್ವತ್ತು, ಕಳಕಳಿ ಮುಂತಾದವು ನಮಗಿಂದು ದಾರಿದೀಪ. ಸನಾತನವೆಂಬ ಹೊರೆಗೆ ಪರ್ಯಾಯಗಳಲ್ಲಿ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟ ಅನನ್ಯವಾದುವು
Binding
Soft Bound
Author
M Venkataswamy
ISBN-13
9788198356757
Number of Pages
288
Publisher
Nava Karnataka Publications Pvt Ltd
Publication Year
2025
Height
1 CMS
Length
22 CMS
Weight
400 GMS
Width
15 CMS
Language
Kannada