Quantity
Product Description
ಈ ಬದುಕನ್ನು ಬದಲಾಯಿಸಬಲ್ಲ ಅವಕಾಶಗಳು ಇಲ್ಲಿ ಎಲ್ಲರಿಗೂ ಲಭ್ಯವಿದೆ. ಆದರೆ ಅನೇಕರು ತಮ್ಮಲ್ಲಿ ಬೇರುಬಿಟ್ಟಿರುವ ಸೋಮಾರಿತನ, ಆಲಸ್ಯ, ಕೀಳರಿಮೆ, ಅಜ್ಞಾನ, ಭಯ ಹಾಗೂ ಆತ್ಮವಿಶ್ವಾಸಗಳ ಕೊರತೆಯಿಂದ ಭವ್ಯವಾದ ಬದುಕನ್ನು ಕಟ್ಟಿಕೊಳ್ಳದೆ ಸಾಮಾನ್ಯರಾಗಿಯೇ ಉಳಿದುಬಿಡುತ್ತಾರೆ. ಇನ್ನು ಹಲವರು, ತಮ್ಮ ಬದುಕು ಬೇರೊಬ್ಬರಿಂದ ಅಥವಾ ಅದೃಷ್ಟದ ಮೂಲಕ ಬದಲಾಗುತ್ತದೆಂಬ ಭ್ರಮೆಯಲ್ಲಿ ಮುಳುಗಿಹೋಗಿರುತ್ತಾರೆ. ತೆವಳುವ ಕಂಬಳಿಹುಳವು ಹಕ್ಕಿಯಂತೆ ಹಾರುವ ಕನಸು ಕಾಣುತ್ತಾ ಗೂಡನ್ನು ಹರಿದು ಚಿಟ್ಟೆಯಾಗಿ ರೂಪಾಂತರಹೊಂದಿ ಹೊರಬರುವಂತೆ ಈ ಜಾಡ್ಯಗಳನ್ನು ಕಿತ್ತೆಸೆಯಲು ನಮ್ಮಲ್ಲಿ ಕೂಡ ತೀವ್ರ ತೆರನಾದ ಪರಿವರ್ತನೆಯೆಂಬ ಕ್ರಾಂತಿಗೆ ಕಿಚ್ಚೊಂದನ್ನು ಹಚ್ಚಬೇಕಿದೆ. `ಈ ಬದುಕು ಇರುವುದು ಸುಮ್ಮನೆ ಸವೆಯುವುದಕ್ಕಲ್ಲ; ಬದಲಿಗೆ ಏನಾದರೊಂದು ಅಸಾಧಾರಣವಾದ ಸಾಧನೆ ಮಾಡಿ ಯಶಸ್ವಿ ಬದುಕನ್ನು ಸವಿಯುವುದಕ್ಕೆಂಬುದನ್ನು' ಅರಿತು ಬದುಕೆಂಬ ಕುಲುಮೆಗೆ ಆತ್ಮವಿಶ್ವಾಸ, ಶಿಸ್ತು, ಶ್ರಮ ಹಾಗೂ ಸಾಹಸಗಳೆಂಬ ಸೌದೆಯನ್ನು ಹಾಕಿ ಕ್ರಿಯಾಶೀಲತೆ ಎಂಬ ಆಯುಧವನ್ನು ಹರಿತಗೊಳಿಸಿ ಜ್ಞಾನವೆಂಬ ಕಿಚ್ಚನ್ನು ಹಚ್ಚಿ ಬದುಕಿನ ಹೋರಾಟದಲ್ಲಿ ಯಶಸ್ಸೆಂಬ ಗೆಲುವು ಸಾಧಿಸಲು ಪ್ರೇರಣೆಯ ಮುನ್ನುಡಿಯೇ ಈ `ಸ್ವಯಂ ಕ್ರಾಂತಿ'!
Author
Gireesh Sripada Mevundi
Binding
Soft Bound
ISBN-13
9788168955707
Number of Pages
160
Publication Year
2026
Publisher
Sawanna Enterprises
Height
2 CMS
Length
22 CMS
Weight
200 GMS
Width
14 CMS
Language
Kannada