Product Description
ಸಾಹಿತ್ಯಕ್ಷೇತ್ರ - ವಿಜ್ಞಾನಕ್ಷೇತ್ರಗಳಲ್ಲಿ ತೆರೆಯ ಮರೆಗೆ ಸರಿದ ಕೆಲವೊಂದು ಸಂಗತಿಗಳನ್ನು ಇಲ್ಲಿ ಎದುರಿಗೆ ತಂದು ನಿಲ್ಲಿಸಲಾಗಿದೆ. ಅಂಚಿಗೆ ಸರಿದು ಲೆಕ್ಕಕ್ಕೇ ಇಲ್ಲವೆಂಬಂತೆ ಅವಗಣಿಸಿದ ಸಣ್ಣಪುಟ್ಟ ವಿಚಾರಗಳೂ ಮಹತ್ವಪಡೆದು ಇಲ್ಲಿ ರಾರಾಜಿಸಿವೆ. ಹಲವಾರು ಕಾಯಿಲೆಗಳಿಂದ ಇಂದು ನಾವು ಮುಕ್ತಿಪಡೆದು ಆರೋಗ್ಯವಂತರಾಗಿದ್ದೇವೆ. ಅದಕ್ಕಾಗಿ ಪ್ರಯೋಗಶಾಲೆಯಲ್ಲಿ ಬಲಿಪಶುಗಳಾಗಿ ಜೀವತೆತ್ತ ಇಲಿಗಳೆಷ್ಟು ? ನಾವೆಂದಾದರೂ ಯೋಚಿಸಿದ್ದಿದೆಯೇ ? ಎಲ್ಲವೂ ಮಾನವನ ಕಲ್ಯಾಣಕ್ಕಾಗಿ ಎಂಬ ಸಮಜಾಯಿಷಿ ಇರುತ್ತದೆ. ಇಂದು ಪ್ರಪಂಚ ರೋಬೋ ತಂತ್ರಜ್ಞಾನದ ಕಡೆಗೆ ವಾಲುತ್ತಿದೆ. ಮನುಷ್ಯನಿಂದ ಸಾಧ್ಯವಾಗದ ಕೆಲಸ ರೋಬೋಗಳಿಂದ ಮಾಡಿಸುವ ಚಾಣಾಕ್ಷ ಬುದ್ಧಿಯ ನಮಗೆ ಭೂಮಿಯ ಮೇಲೆ ಮಾಡಲು ಇನ್ನೇನು ಕೆಲಸ ಉಳಿದಿದೆ ? ಗಂಗಾ ನದಿಯ ಬಗ್ಗೆ ನಾವಿಂದು ತಿಳಿದುಕೊಳ್ಳಲೇಬೇಕಾದ ಉಪಯುಕ್ತ ಲೇಖನ ಇಲ್ಲಿ ನಮ್ಮ ಕಣ್ತೆರೆಸಲು ಪ್ರಯತ್ನಿಸಿದೆ. ಇಂಥ ಆಸಕ್ತಿದಾಯಕ ವಿಚಾರಗಳತ್ತ ನಮ್ಮನ್ನು ಚಿಂತಿಸುವಂತೆ ಮಾಡುವ ಬರಹಗಳು.