Product Description
ಮಹಾಶ್ವೇತಾದೇವಿ (1926) ಬರಹಗಾರ್ತಿ ಹಾಗೂ ಭಾರತೀಯ ಸಮಾಜ ಸುಧಾರಕಿ. ಇವರು ಬಾಂಗ್ಲಾದೇಶದಲ್ಲಿರುವ ಢಾಕಾ ನಗರದಲ್ಲಿ ಜನಿಸಿದರು. ತಂದೆ ಮನಿಷ್ ಘಟಕ್. ತಾಯಿ ಧರಿತ್ರಿ ದೇವಿ. ತಂದೆ ಕವಿ ಹಾಗೂ ಕಾದಂಬರಿಕಾರ. ತಾಯಿ ಬರಹಗಾರ್ತಿ ಹಾಗೂ ಸಮಾಜ ಸುಧಾರಕಿ. ತಂದೆಯ ತಮ್ಮ ರಿತ್ವಿಕ್ ಘಟಕ್ ಖ್ಯಾತ ಚಲನಚಿತ್ರ ನಿರ್ದೇಶಕ. ತಾಯಿಯ ತಮ್ಮ ಶಂಕ ಚೌಧುರಿ ಓರ್ವ ಶಿಲ್ಪಿ. ಮತ್ತೋರ್ವ ಸೋದರ ಸಚಿನ್ ಚೌಧುರಿ ಪತ್ರಿಕೆಯೊಂದರ ಸಂಸ್ಥಾಪಕ-ಸಂಪಾದಕ. ಇಂತಹ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ಮಹಾಶ್ವೇತಾದೇವಿಯವರು ರವೀಂದ್ರನಾಥ್ ಠಾಕೂರರ ಶಾಂತಿನಿಕೇತನದಲ್ಲಿ ಬಿ.ಎ. ಇಂಗ್ಲಿಷ್ ಆನರ್ಸ್ ಪೂರ್ಣಗೊಳಿಸಿದರು. ಅನಂತರ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ. ಪದವಿಯನ್ನು ಗಳಿಸಿದರು. ‘ಇಪ್ಟಾ’ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ನಾಟಕಕಾರ ಬಿಜೋನ್ ಭಟ್ಟಾಚಾರ್ಯರನ್ನು ಮದುವೆಯಾದರು. ನಂತರ 1959ರಲ್ಲಿ ಭಟ್ಟಾಚಾರ್ಯರಿಮ್ದ ವಿಚ್ಛೇದನವನ್ನು ಪಡೆದು ಈಗ ಸ್ವತಂತ್ರ ಜೀವನವನ್ನು ನಡೆಸುತ್ತಿರುವರು.