Quantity
Product Description
೨೦೦೯ರಲ್ಲಿ ನಾನು ಪ್ರಕಟಿಸಿದ್ದ “ಖಾಸಗಿ ವಿಮರ್ಶೆ” ಸಂಕಲನದಲ್ಲಿ ಗಿರೀಶರ ಎರಡು ಪತ್ರಗಳನ್ನು ಪ್ರಕಟಿಸಿದ್ದೆ. ೨೦೨೧ರಲ್ಲಿ ಪ್ರಕಟಿಸಿದ ʼಕಪಾಳಮೋಕ್ಷ ಪ್ರವೀಣʼ ಸ್ವಭಾವ ಚಿತ್ರಗಳ ಸಂಪುಟದಲ್ಲಿ ಅವರ ಸ್ವಭಾವ ಚಿತ್ರವನ್ನು ಬರೆದಾಗಲೂ ಒಪ್ಪದೇ ಪ್ರತಿಭಟಿಸಿದ್ದರು.
ಸ್ನೇಹಶೀಲರಾಗಿದ್ದರೂ ಅವರಿಗೆ ಜನರನ್ನು ಪರಿಚಯ ಮಾಡಿಕೊಳ್ಳುವುದರಲ್ಲಿ, ಮೇಲೆ ಬಿದ್ದು ಒಡನಾಡುವುದರಲ್ಲಿ ಉತ್ಸಾಹವಿರಲಿಲ್ಲ. ಆದರೆ ಆಡುವ ಮಾತುಗಳನ್ನು ನೇರವಾಗಿ ಆಡುತ್ತಿದ್ದರು. ಯಾವ ಸಂಗತಿಗಳನ್ನೂ ಮುಚ್ಚಿಡುತ್ತಿರಲಿಲ್ಲ. ವೈಯಕ್ತಿಕ ಸಂಗತಿಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಒಂದು ಸಂದರ್ಭ ನೆನಪಾಗುತ್ತದೆ – ಅವರ ಬರವಣಿಗೆಯ ರೀತಿಯನ್ನು ಮೆಚ್ಚಿದ್ದ ಸುಮತೀಂದ್ರ ನಾಡಿಗರು ಗಿರೀಶರನ್ನು ಭೇಟಿ ಮಾಡುವ, ಮಾತನಾಡಿಸುವ ಉತ್ಸುಕತೆ ತೋರಿದರು. ಗಿರೀಶರು ಬೇಡ, ಬೇಡ ಎಂದು ಹೇಳುತ್ತಲೇ ಬಂದರು. ಗೋಖಲೆ ವಿಚಾರ ಸಂಸ್ಥೆಯ ಒಂದು ಸಮಾರಂಭಕ್ಕೆ ಗಿರೀಶ್ ಕೆಂಗೇರಿಯಿಂದ ಬಂದಿದ್ದರು. ಸಭಿಕರ ಗುಂಪಿನಿಂದ ದೂರದಲ್ಲಿ ಹೊರ ಆವರಣದಲ್ಲಿ ನಿಂತಿದ್ದರು. ನಾಡಿಗರೂ ಬಂದಿದ್ದರು. ವಾಘ್ ಬಂದಿದ್ದಾರೆಂದು ತಿಳಿಸಿದೆ. ಸರಿ ನಾನೇ ಅವರ ಬಳಿ ಬಂದು ಮಾತನಾಡುತ್ತೇನೆ ಎಂದು ಹೊರಟರು. ನಾಡಿಗರಿಗೂ ವಯಸ್ಸಾಗಿತ್ತು. ನಡಿಗೆಯಲ್ಲಿ ಚುರುಕಿರಲಿಲ್ಲ. ನಿಧಾನವಾಗಿ ಹೆಜ್ಜೆ ಹಾಕುತ್ತಾ ಮೆಟ್ಟಲಿಳಿದು ಬಂದರು. ಅವರು ಹತ್ತಿರ ಬರುವ ಹೊತ್ತಿಗೆ ವಾಘ್ ಹಿಂದೆ ಸರಿಯುತ್ತಿದ್ದರು. ನಾಡಿಗರು ಸಮೀಪ ಬಂದು ಪರಿಚಯ ಹೇಳಿಕೊಂಡು ಗಿರೀಶರ ಬರವಣಿಗೆಯ ಬಗ್ಗೆ ಒಂದೆರಡು ವಾಕ್ಯ ಹೇಳಿದರು. ಗಿರೀಶರ ಮುಖ ಸಪ್ಪಗಾಯಿತು. ತೊದಲಿದರು, ಹಿಂದೆ ಸರಿದರು. ಪ್ರಧಾನ ಮಂತ್ರಿ, ಮುಖ್ಯ ಮಂತ್ರಿಗಳನ್ನು ಕೂಡ ಎಗ್ಗಿಲ್ಲದೆ ಮಾತಿಗೆ ಎಳೆಯುತ್ತಿದ್ದ ನಾಡಿಗರು ಇವರನ್ನು ಮಾತಿಗೆಳೆಯುವುದರಲ್ಲಿ ವಿಫಲರಾದರು. ಒಂದೊಂದೂವರೆ ನಿಮಿಷದಲ್ಲಿ ಭೇಟಿ ಮುಗಿದೇ ಹೋಯಿತು. ಗಿರೀಶರನ್ನು ಹುಡುಕಿದೆ. ಅವರು ಸಿಗಲೇ ಇಲ್ಲ.
Author
Girish V Wagha
Binding
Soft Bound
ISBN-13
9788198226341
Number of Pages
116
Publication Year
2025
Publisher
Amulya Pustaka
Height
1 CMS
Length
22 CMS
Weight
100 GMS
Width
14 CMS
Language
Kannada