Product Description
ಕನ್ನಡಕ್ಕೆ ಅನುವಾದಗೊಂಡಿರುವ ಆತ್ಮಕಥೆಗಳಲ್ಲಿಯೇ ‘ಹುಲಿಯ ನೆರಳಿನೊಳಗೆ : ಅಂಬೇಡ್ಕರ್ವಾದಿಯ ಆತ್ಮಕಥೆ’ ಭಿನ್ನ ಹಾಗೂ ವಿಶೇಷ. ಕಾರಣ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಹೋರಾಟ, ಚಿಂತನೆ ಹಾಗೂ ವ್ಯಕ್ತಿತ್ವ ಈ ಆತ್ಮಕಥೆಯ ಪ್ರಧಾನ ಕೇಂದ್ರ ಬಿಂದು ಆಗಿರುವುದರಿಂದ. ನಿಮ್ಗಾಡೆ ಅವರ ಬಾಲ್ಯದ ಕೌಟುಂಬಿಕ ವಿವರದೊಟ್ಟಿಗೆ ಈ ಆತ್ಮಕಥೆ ಆರಂಭವಾಗುತ್ತದೆ. ಹಸಿವು-ಬಡತನ, ಜಾತಿ-ಅಪಮಾನ, ಬಾಬಾ ಸಾಹೇಬ್ ಅಂಬೇಡ್ಕರ್ ಒಟ್ಟಿಗಿನ ಒಡನಾಟ-ಹೋರಾಟ, ಬಾಬಾ ಸಾಹೇಬರ ನಿಧನ ಈ ಎಲ್ಲಾ ಅನುಭವಗಳ ವಿವರದೊಟ್ಟಿಗೆ ಸಾಗುತ್ತದೆ. ನಿಮ್ಗಾಡೆ ಅವರು ಅಕ್ಟೋಬರ್ ೨೦೦೬ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ನಡೆದ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧಮ್ಮಕ್ಕೆ ಮರಳಿದ ೫೦ನೇ ವರ್ಷಾಚರಣೆಯ ಸಮಾರಂಭದಲ್ಲಿ ಭಾಗವಹಿಸಿದ ವಿವರದೊಟ್ಟಿಗೆ ಆತ್ಮಕಥೆ ಮುಕ್ತಾಯವಾಗುತ್ತದೆ. ಏಕಕಾಲದಲ್ಲಿ ‘ಹುಲಿಯ ನೆರಳಿನೊಳಗೆ’ ನಿಮ್ಗಾಡೆ ಅವರ ಆತ್ಮಕಥೆಯೂ; ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯೂ ಆಗಿದೆ.