Quantity
Product Description
ಪೂಜ್ಯ ಕೆಎಸ್ ನಾರಾಯಣಾಚಾರ್ಯರು, ರಾಮಾಯಣಭಾರತಭಾಗವತಗಳ ಕುರಿತಾಗಿ ಬರೆಯುವುದಕ್ಕಿಂತ ಮೊದಲೇ ವೇದಗಳ ಕುರಿತಾಗಿ, ಅತ್ಯಂತ ಸರಳವಾಗಿ, ವೇದಮಹಾರ್ಥಗಳ ಅನ್ವೇಷಕರೂಪಕವಾಗಿ, ವೈಚಾರಿಕವಾಗಿ ವಿಶ್ಲೇಷಿಸಿ ಬರೆಯಲಾರಂಭಿಸಿದರು. ಪ್ರಕಾಶಕರನ್ನು ಹುಡುಕುವ ಗೋಜಿಗೆ ಹೋಗದೆ ಬೇಂದ್ರೆಯವರ ಪ್ರೋತ್ಸಾಹದಿಂದ ಪ್ರಕಟಿಸುತ್ತಹೋದುದು ಇತಿಹಾಸ. ಹಾಗೆ ಅವರು ವೇದ ಸಂಸ್ಕೃತಿಯ ಪರಿಚಯಗಳ ೧೦ ಸಂಪುಟಗಳನ್ನು ಪ್ರಕಟಿಸಿದ್ದೂ ಮತ್ತೆಮತ್ತೆ ಮುದ್ರಿಸಿದ್ದೂ ಆಗಿ ಜನಪ್ರಿಯತೆಯನ್ನೂ ಗಳಿಸಿದ್ದು ಸರಿಯಷ್ಟೆ! ಅವುಗಳನ್ನು ಮೆಚ್ಚಿ , ಅಂಥ ಅಪರೂಪದ ಸಾಹಿತ್ಯವನ್ನು ಕೊಂಡಾಡಿದವರಲ್ಲಿ ಡಿವಿಜಿ, ಬೇಂದ್ರೆ, ಎನ್ಕೆ ಮತ್ತು ಎನ್ ಟಿ ಶ್ರೀನಿವಾಸಯ್ಯಂಗಾರ್ ಅವರಂತಹ ದೊಡ್ಡದೊಡ್ಡ ವಿದ್ವಾಂಸರೂ ಸಾಹಿತಿಗಳೂ ಸೇರಿದ್ದರು. ಆ ಕಾಲದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಆ ಮಾಲಿಕೆಯ ೨ ನೇ ಸಂಪುಟಕ್ಕೆ ಲಭಿಸಿತ್ತು. ಇದೆಲ್ಲ ಹಳೆಯ ಕತೆ. ಮುಂದೆ, ಆಚಾರ್ಯರ ಸಮಗ್ರ ಕೃತಿಗಳ ಜವಾಬ್ದಾರಿಯನ್ನು ಸಾಹಿತ್ಯ ಪ್ರಕಾಶನ ಹೊತ್ತುಕೊಂಡ ನಂತರ, ಆ ೧೦ ಸಂಪುಟಗಳನ್ನು ೩ ಬೃಹತ್ ಸಂಪುಟಗಳ ಸೆಟ್ ಮಾಡಿ, ಗಟ್ಟಿ ರಟ್ಟಿನ ಬೈಂಡಿಂಗ್, ಸುಂದರ ರಕ್ಷಾಕವಚ, ಸುರಸುಂದರ ಮುದ್ರಣ, ತಪ್ಪುಗಳೇ ಇಲ್ಲದಂತೆ ಎಚ್ಚರಿಕೆಯ ಪ್ರೂಫ್ ರೀಡಿಂಗ್, ಹಗುರತೂಕದ ಕಾಗದ…. ಹೀಗೆ ಏನೆಲ್ಲ ಶ್ರಮವಹಿಸಿ ಮುದ್ರಿಸಿ ಪ್ರಕಟಿಸಲಾರಂಭಿಸಿತು. ಹೆದಹೆದರಿಯೇ ದೊಡ್ಡ ಸಾಹಸಕ್ಕೆ, ಬೃಹತ್ ಬಂಡವಾಳಕ್ಕೆ ಕೈಹಾಕಿದ ಸಾಹಿತ್ಯ ಪ್ರಕಾಶನ ಅದರ ೩ ಮುದ್ರಣಗಳನ್ನು ವಿತರಿಸಿ ಸುಮ್ಮನಾಗುವ ಸಂದರ್ಭದಲ್ಲಿ ಮತ್ತೆ ವಿಪರೀತ ಬೇಡಿಕೆ ಹುಟ್ಟಿಬಿಟ್ಟಿದೆ. ಅದೇಅದೇ ಆಕಾಂಕ್ಷಿಗಳು ಎಲ್ಲ ಪುಸ್ತಕ ಮಳಿಗೆಗಳಲ್ಲಿ ವಿಚಾರಿಸುತ್ತಿರುತ್ತಾರೆಂಬುದು ನಿಜವಾದರೂ ಬೇಡಿಕೆ ಬಹಳವಾಗಿರುವುದೂ ನಿಜವೇ! ಇನ್ನೇನು ಈ ತಿಂಗಳ ಕೊನೆಯ ಹೊತ್ತಿಗೆ “ ವೇದ ಸಂಸ್ಕೃತಿಯ ಪರಿಚಯ” ದ ೧೦ ಭಾಗಗಳೂ ಸೇರಿದ ೩ ಬೃಹತ್ ಸಂಪುಟಗಳ ಸೆಟ್ ತಯಾರಾಗಲಿದೆ.
Binding
Hard Bound
Number of Pages
2000
Publication Year
2022
ISBN-13
9789390738687
Publisher
Saahitya Prakashana (Hubbali)
Author
Prof K S Narayanacharya
Width
15 CMS
Height
20 CMS
Length
22 CMS
Weight
3000 GMS
Language
Kannada