Select Size
Quantity
Product Description
ರೈತನ ಒಬ್ಬ ಅಶಿಕ್ಷಿತ ಪೋರ, ಬೆಳೆದು ಆಕಸ್ಮಿಕವಾಗಿ ರಾಜನಾಗಿ ಚೆಂದ ಶಿಕ್ಷಣವನ್ನು ಪಡೆದು. ಸ್ವಂತ ಬಲದಿ೦ದ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುತ್ತಾನೆ. ಶಿಕ್ಷಣದಿ೦ದಲೇ ಪರಿವರ್ತನೆ, ಪ್ರಗತಿ ಸಾಧ್ಯವೆ೦ದು ನ೦ಬಿದ ಈ ರಾಜನು ಅಸ್ಪಶ್ಯರಿಗೆ, ಬುಡಕಟ್ಟು ಸಮಾಜದವರಿಗೆ ಶಿಕ್ಷಣ ನೀಡಬೇಕೆ೦ದು ರಾಜಾಜ್ಞೆಯನ್ನು ಹೊರಡಿಸುತ್ತಾನೆ. ವಂಚಿತರ ಬಾಗಿಲಿಗೆ ಶಿಕ್ಷಣದ ಗ೦ಗೆಯನ್ನು ಹರಿಸುತ್ತಾನೆ. ಕಡ್ಡಾಯ ಪ್ರಾಥಮಿಕ ಶಿಕ್ಷಣ, ಜೀತ ವಿಮೋಚನೆ, ಅಸ್ಪ್ರಶ್ಯತೆ ನಿವಾರಣೆಯ ಕಾನೂನು ಜಾರಿಗೆ ತರುತ್ತಾನೆ. ಲೋಕಕಲ್ಯಾಣ, ಉತ್ತಮ ಆಡಳಿತ, ಮೂಢನ೦ಬಿಕೆಯ ಉಚ್ಚಾಟನೆಯ ಮೂಲಕ ಸಾಮಾಜಿಕ ಕ್ರಾ೦ತಿಗೆ ನಾ೦ದಿ ಹಾಡುತ್ತಾನೆ. ಮಹಾತ್ಮ ಫುಲೆ, ಡಾ. ಅ೦ಬೇಡ್ಕರ್, ಶಾಹೂ, ಗೋಖಲೆ, ರಾನಡೆ ಮು೦ತಾದ ನಾಯಕರ ಬೆನ್ನ ಹಿಂದೆ ಈ ರಾಜನ ನೆರಳಿದೆ. ಇಂತಹ ಅಪರೂಪದ ರಾಜ ಬರೋಡೆಯ ಸಯಾಜಿರಾವ ಗಾಯಕವಾಡ ಮಹಾರಾಜರ ಕಿರು ಪರಿಚಯವನ್ನು ಬಾಬಾ ಭಾ೦ಡವರವರು “ಸಾಮಾಜಿಕ ಕ್ರಾಂತಿಯ ಹರಿಕಾರ - ಲೋಕರಾಜ ಸಯಾಜಿ ರಾವ ಗಾಯಕವಾಡ" ಕೃತಿಯಲ್ಲಿ ಮಾಡಿದ್ದಾರೆ.
ಚ೦ದ್ರಕಾ೦ತ ಪೋಕಳೆ ಅವರು ಈ ಮೂಲ ಮರಾಠಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಯಾಜಿ ರಾವ ಗಾಯಕವಾಡ ಅವರ ಕುರಿತಂತೆ ಇತಿಹಾಸದಲ್ಲಿ ದಾಖಲಾಗಿರುವುದು ಅತಿ ಕಡಿಮೆ. ಗೋಪಾಲ ಎನ್ನುವ ಅನಕ್ಷರಸ್ಮ ಬಾಲಕನಿಗೆ ಅವಿರೀಕ್ಟಿತವಾಗಿ ರಾಜನಾಗುವ ಅವಕಾಶ ಒದಗಿ ಬರುವುದು. ಆತನಿಗೆ ರಾಣಿ ಆಧುನಿಕ ಶಿಕ್ಷಣವನ್ನು ಕಲಿಸುವುದು. ಆತ ಬೆಳೆದ೦ತೆಯೇ ಆಧುನಿಕತೆಯ ಚಿಂತನೆಗಳನ್ನು ರೂಢಿಸಿಕೊಳ್ಳುವುದು ಮತ್ತು ಅದನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವ ಮೂಲಕ ಬ್ರಿಟಿಷರಿಗೇ ತಲೆನೋವಾಗುವುದು ಈ ಕೃತಿಯಲ್ಲಿ ಅತ್ಯ೦ತ ಕುತೂಹಲಕಾರಿಯಾಗಿ ನಿರೂಪಿಸಲಾಗಿದೆ.
Weight
100 GMS
Length
22 CMS
Width
14 CMS
Height
2 CMS
Author
Chandrakanth Pokale
Publisher
Nava Karnataka Publications Pvt Ltd
Publication Year
2016
Number of Pages
80
ISBN-13
9789389308037
Binding
Soft Bound
Language
Kannada