Select Size
Quantity
Product Description
ಲೇಖಕ ಹೆಚ್.ಎನ್. ನಾಗಮೋಹನದಾಸ್ ಅವರ ಕೃತಿ ʻಸಂವಿಧಾನ ಮತ್ತು ವಚನಗಳುʼ. ಪುಸ್ತಕದಲ್ಲಿ ಶರಣರ ವಚನಗಳು ಹಾಗೂ ನಮ್ಮ ಸಂವಿಧಾನದ ಕೆಲವು ಮೂಲ ತತ್ವಗಳ ನಡುವಣ ಸಂಬಂಧವನ್ನು ವಿವಿಧ ನೆಲೆಗಳಲ್ಲಿ ಚರ್ಚಿಸಲಾಗಿದೆ. ವಚನ ಸಾಹಿತ್ಯ ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಆಹಾರ, ಅಕ್ಷರ ಹಕ್ಕುಗಳ ಕುರಿತಾದ ಹಲವು ವಿಷಯಗಳು ಸಂವಿಧಾನದಲ್ಲಿ ಸೇರ್ಪಡೆಯಾಗಿವೆ. ಈ ಹಿನ್ನೆಲೆಯಲ್ಲಿ ಇವುಗಳ ನಡುವಿನ ಸಂಬಂಧವನ್ನು ಪರಿಶೀಲಿಸುವ ಪ್ರಯತ್ನ ಇಲ್ಲಿ ನಡೆದಿದೆ.
ಪುಸ್ತಕದ ಬೆನ್ನುಡಿಯಲ್ಲಿ ಸಿದ್ದನಗೌಡ ಪಾಟೀಲ ಅವರು, “ಕೃತಿಯಲ್ಲಿ ಸಂವಿಧಾನದ ಮೂಲ ಆಶಯಗಳು ಜನಪರವಾದ ತತ್ವಶಾಸ್ತ್ರೀಯ ಚಿಂತನೆಗಳಲ್ಲೂ ಹೇಗೆ ಪ್ರತಿಪಾದನೆಗೊಂಡಿವೆ ಎಂಬ ಅಂಶವನ್ನು ತಮ್ಮ ಆಳವಾದ ಅಧ್ಯಯನ ವಿಶ್ಲೇಷಣೆಯ ಮೂಲಕ ನಾಗಮೋಹನದಾಸ್ ಅವರು ಸಾದರಪಡಿಸಿದ್ದಾರೆ. ವಿಶ್ವದ ಮತ್ತು ಭಾರತೀಯ ಪರಂಪರೆಯಲ್ಲಿ ಜೀವಪರ ಚಿಂತನೆಗಳು ಜೀವ ವಿರೋಧಿ ಚಿಂತನೆಗಳ ವಿರುದ್ಧ ಸದಾ ಸೆಣಸುತ್ತಲೇ ಬಂದಿವೆ. ಅಂಥ ಕೆಲವು ತಾತ್ವಿಕ ಧಾರೆಗಳನ್ನು ಪ್ರಸ್ತಾಪಿಸುತ್ತ 12ನೆಯ ಶತಮಾನದ ಬಸವಣ್ಣ ಮತ್ತು ಎಲ್ಲ ಶರಣರ ವಚನಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನದ ಆಶಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ವಚನಗಳನ್ನಾಧರಿಸಿ, ತುಲನಾತ್ಮಕವಾಗಿ ಈ ಕೃತಿಯಲ್ಲಿ ಮಂಡಿಸಿದ್ದಾರೆ. ಬುದ್ಧ, ಬಸವ, ಇತರ ವಚನಕಾರರು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರುಗಳು ಸಮಕಾಲೀನರಲ್ಲವಾದರೂ ಅವರೆಲ್ಲರಲ್ಲಿ 'ಜೀವ ಕೇಂದ್ರಿತ', 'ಮನುಷ್ಯ ಕೇಂದ್ರಿತ' ತುಡಿತಗಳು, ಚಿಂತನೆಗಳು ಹೇಗೆ ಸಮಾನ ಆಶಯಗಳನ್ನು ಹೊಂದಿವೆ ಎಂಬುದನ್ನು ಈ ಕೃತಿಯಲ್ಲಿ ನೋಡಬಹುದು. ವಚನ ಚಳುವಳಿ ಮತ್ತು ಭಾರತದ ಸಂವಿಧಾನ ಪ್ರತಿಪಾದಿಸಿದ ಮಾನವೀಯ ಸಮಾಜದ ನಿಯಮಗಳು, ಆದರ್ಶಗಳು, ಹಕ್ಕು ಮತ್ತು ಕರ್ತವ್ಯಗಳು ಇಂದಿನ ಸಂಘರ್ಷಮಯ ಸಮಾಜಕ್ಕೆ ದಿಕ್ಸೂಚಿಗಳಾಗಿವೆ. ಅಂಥ ದಿಕ್ಸೂಚಿಯನ್ನು ಈ ಕೃತಿ ಒಳಗೊಂಡಿದೆ” ಎಂದು ಹೇಳಿದ್ದಾರೆ.
Author
Justice H N Nagamohan Das
Publisher
Nava Karnataka Publications Pvt Ltd
Publication Year
2021
Number of Pages
96
ISBN-13
9789392451041
Binding
Soft Bound
Length
22 CMS
Width
14 CMS
Height
1 CMS
Weight
100 GMS
Language
Kannada