Select Size
Quantity
Product Description
ಶ್ರೀ ಡಿ.ವಿ.ಜಿ. ಅವರು ಪತ್ರಿಕಾ ವೃತ್ತಿಯನ್ನಾರಂಭಿಸಿ ಇಂದಿಗೆ ಅರುವತ್ತು ವರ್ಷಗಳ ಮೇಲಾಯಿತು. ಈ ದೀರ್ಘಾವಧಿಯ ಕಾಲದ ಜ್ಞಾನಾನುಭವಗಳ ಸಾರ, ಈ ಪುಸ್ತಕ. ವೃತ್ತ ಪತ್ರಿಕೆಯ ಪ್ರಪಂಚ ದಿನೇ ದಿನೇ ಬೆಳೆಯುತ್ತ, ಬದಲಾಯಿಸುತ್ತ ಹೋಗುತ್ತದೆ. ಆದರೂ ಇಂದಿನ ಮಟ್ಟಗೆ ಈ ಗ್ರಂಥ ಒಂದು ಸಂಕ್ಷೇಪ ಕ್ರಮದಲ್ಲಿ ಸಮಗ್ರವಾಗಿದೆ. ಪತ್ರಿಕಾ ಪ್ರಪಂಚದ ಯಾವೊಂದು ಮುಖ್ಯ ವಿಷಯವನ್ನೂ ಇಲ್ಲಿ ವಿವೇಚಿಸದೆ ಬಿಟ್ಟಿಲ್ಲ.
ಇದರಲ್ಲ, ಮೊದಲಲ್ಲ, ಪತ್ರಿಕೆ ಹುಟ್ಟ ಬೆಳೆದ ರೀತಿಯ ಚರಿತ್ರೆಯಿದೆ. ಅನಂತರ ಪತ್ರಿಕೆಗಳ ಕರ್ತವ್ಯ ಪ್ರಭಾವ ಇತ್ಯಾದಿ ವಿಚಾರಗಳ ಸಮೀಕ್ಷೆಯಿದೆ. ಪತ್ರಿಕಾ ಸ್ವಾತಂತ್ರ್ಯದ ಸ್ವರೂಪ, ಅವಶ್ಯಕತೆ, ಪರಿಣಾಮ-ಇವುಗಳನ್ನು ಮೂರು ಅಧ್ಯಾಯಗಳ ಹರಹಿನಲ್ಲ ಅವಲೋಕಿಸಿದ್ದಾರೆ. “ಪತ್ರಿಕಾವೃತ್ತಿ ಆಗ-ಈಗ” ಎಂಬ ಅಧ್ಯಾಯ ಲೇಖಕರ ಅನುಭವ ಕರಂಡದ ಅನೇಕ ಸ್ವಾರಸ್ಯವಾದ ಸಂಗತಿಗಳಿಂದ ತುಂದೆ. ‘ಪತ್ರಿಕೋದ್ಯೋಗಿಯ ಪ್ರತಿಜ್ಞೆ’; ‘ಏಚಾರವೇ, ಪ್ರಚಾರವೇ?’: ‘ಪತ್ರಿಕೆಯ ಚತುರಂಗ’; ‘ಕಸಬು, ತಯಾರಿ’; ‘ಪ್ರೆಸ್ ಕಮಿಷನ್’; ‘ಪ್ರೆಸ್ ಕೌನ್ಸಿಲ್’;- ಇವೇ ಮೊದಲಾದವು ಇತರ ಅಧ್ಯಾಯಗಳ ವಿಷಯವನ್ನು ವ್ಯಕ್ತಪಡಿಸುತ್ತವೆ. ಕೊನೆಯ ಅಧ್ಯಾಯಗಳಲ್ಲಿ ಲೇಖಕರ ದೃಷ್ಟಿಯಲ್ಲಿ ಆದರ್ಶ ಪತ್ರಿಕೆ ಹೇಗಿರಬೇಕೆಂಬ ವಿವರಣೆಯಿದೆ. ಪತ್ರಿಕೋದ್ಯೋಗಿಗಳು ಅವಶ್ಯವಾಗಿ ತಿಆದಿರಬೇಕಾದ ವೃತ್ತಿ ವಿಷಕವಾದ ಕಾನೂನುಗಳ ಪಟ್ಟಯನ್ನು ಅನುಬಂಧದಲ್ಲಿ ಕಾಣಬಹುದು. ‘ಪತ್ರಿಕಾವೃತ್ತಿ ಮತ್ತು ಸಾಹಿತ್ಯ’ವೆಂಬ ಕೊನೆಯ ಅನುಬಂಧ ಈ ಲೇಖಕರಿಗೇ ವಿಶಿಷ್ಟವಾದ ವಿಚಾರ ಪರವಾದ ಧೈಯೋದ್ದಿಷ್ಟದಿಂದ ಕೂಡಿದೆ. ಒಟ್ಟನಲ್ಲಿ ಪತ್ರಿಕಾ ವೃತ್ತಿಯವರಿಗೂ ಸಾರ್ವಜನಿಕರಿಗೂ ಉಪಯುಕ್ತವಾದ ಗ್ರಂಥ.
Weight
200 GMS
Width
14 CMS
Height
2 CMS
Length
22 CMS
Publisher
Saahitya Prakashana (Hubbali)
Number of Pages
110
ISBN-13
9789390738816
Binding
Soft Bound
Author
D V Gundappa (DVG)
Language
Kannada