Product Description
ಹೊಸ ಅಡುಗೆ ಕುರಿತ ಪುಸ್ತಕಗಳು ಸಾಕಷ್ಟು ಬರುತ್ತಿವೆ. ಹಾಗೇ ಸಸ್ಯಗಳ ಕುರಿತ ಪುಸ್ತಕಗಳಿಗೂ ಕೊರತೆ ಇಲ್ಲ. ನಾವು ಬಳಸುವ ತರಕಾರಿಗಳ ಕುರಿತಾದರೂ ನಮಗೆ ಎಷ್ಟುಮಟ್ಟಿನ ಪರಿಚಯವಿದೆ ? ಈ ತರಕಾರಿಗಳು ಯಾವ ಯಾವ ಕಡೆಯಿಂದ ಬಂದು ನಮ್ಮ ಆಹಾರದಲ್ಲಿ ಉಪಯೋಗವಾಗುತ್ತಿರಬಹುದು ? ಈ ಕಲ್ಪನೆ ನಮಗೆ ಎಂದಾದರೂ ಬಂದುದುಂಟೇ ? ನಾವು ಉಪಯೋಗಿಸುವ ತರಕಾರಿಗಳಲ್ಲಿರುವ ಔಷಧೀಯ ಗುಣಗಳು, ಪೋಷಕಾಂಶಗಳು, ಆಹಾರದಲ್ಲಿ ಬಳಕೆಯಾಗುವ ವಿಧಾನಗಳು, ತರಕಾರಿಗಳನ್ನು ಬೆಳೆಸುವ ಬಗೆ, ಕೀಟಗಳಿಂದ ಅವನ್ನು ರಕ್ಷಿಸುವ ಬಗೆ ಇತ್ಯಾದಿ ಸಮಗ್ರ ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಬರೆದಿರುವ ಪುಸ್ತಕಗಳು ಕನ್ನಡದಲ್ಲಿ ಇಲ್ಲವೇ ಇಲ್ಲವೆನ್ನಬಹುದು. ಈ ಪುಸ್ತಕ ಮೇಲಿನ ಕೊರತೆಯನ್ನು ತುಂಬಿಸುವ ಒಂದು ಪ್ರಾಮಾಣಿಕ ಪ್ರಯತ್ನ. ತಕರಾರಿಗಳನ್ನು ಬೆಳೆಸುವ ಬಗ್ಗೆ ಸಾಕಷ್ಟು ತಿಳಿವಳಿಕೆಯಿರುವ, ಕೃಷಿ ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕರು ಸಸ್ಯಮೂಲ ಹಾಗೂ ಬೆಳವಣಿಗೆ ಕುರಿತು, ತರಕಾರಿಯಲ್ಲಿನ ಔಷಧೀಯ ಗುಣಗಳು ಹಾಗೂ ಪಾಕ ಶಾಸ್ತ್ರದಲ್ಲಿ ಅವುಗಳ ಉಪಯೋಗ ಕುರಿತು ವೈದ್ಯಕೀಯ ಕಾಲೇಜಿನ ದ್ರವ್ಯಗುಣ ವಿಭಾಗದ ಅಧ್ಯಾಪಕರು ಈ ಪುಸ್ತಕ ಬರೆದಿರುವುದು ಇದರ ವೈಶಿಷ್ಟ್ಯ.