Product Description
ನಮ್ಮ ಕನಸುಗಳಿಗೆ ಎಂಥಾ ಅದ್ಭುತ ಶಕ್ತಿ ಇದೆ ! ಕನಸು ಕಾಣಬೇಕಷ್ಟೆ, ಹಾರಲು ರೆಕ್ಕೆಗಳು ಮೊಳೆಯುತ್ತವೆ. ಆರಂಭವಷ್ಟೆ ಕಷ್ಟ, ಮೊದಲ ಹೆಜ್ಜೆ ಇಟ್ಟಂತೆ ಹಾದಿ ಸುಗಮ....
ಹೀಗೆ, ಪೆರು ಕಣಿವೆಗೆಂದು ಹೊರಟು, ಪರವಾನಗಿ ಇಲ್ಲದಿದ್ದರೂ ಅಕ್ಕಪಕ್ಕದ ದೇಶಗಳಲ್ಲೂ ಸುಳಿದಾಡಿ, ಪ್ರವಾಸ ಹೋದಾಗ ಎದುರಾಗುವ ಭಾಷೆಯ ಸಮಸ್ಯೆಯನ್ನು ತಮ್ಮದೇ ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಪ್ರಶ್ನೆಯನ್ನು ಬಗೆಹರಿಸಿಕೊಂಡು, ಹೋದ ಕಡೆ ನಮ್ಮ ಊರಿನದೇ ಪರಿಸ್ಥಿತಿಯನ್ನು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು ಲೇಖಕಿ ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ಕನಸುಗಾರ್ತಿ ಗೆಳತಿಯ ಜೊತೆಗೂಡಿ ಬೆಟ್ಟವೇರಿ, ಕಣಿವೆ ಇಳಿದು, ಅಮೆಜಾನ್ ನದಿಯಲ್ಲಿ ರಾತ್ರಿ ದೋಣಿ ಪಯಣ ಮಾಡಿದ ರೋಮಾಂಚಕ ಸನ್ನಿವೇಶಗಳನ್ನು, ಮಹಿಳೆಯರ ಅಪೂರ್ವ ಸಾಧನೆಯನ್ನು ದಾಖಲಿಸುವ ಕೃತಿ. ಪುಸ್ತಕ ಓದಿಯೇ ಇದನ್ನು ತಿಳಿಯಬೇಕು.