Product Description
೧೯೬೨ರಲ್ಲಿ ತಮ್ಮ ಮಹಾಕ್ಷತ್ರಿಯ ಕಾದಂಬರಿಗೆ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದ ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳು ‘ಕನ್ನಡ ಸಾಹಿತ್ಯದಲ್ಲಿ ಭೂತ-ವರ್ತಮಾನಗಳನ್ನು ಬೆಸಯಬಲ್ಲ ಶಿಲ್ಲಿ’ಯಾಗಿದ್ದರು. ಸ್ವತಂತ್ರ ಮನೋಭಾವದ ಮತ್ತು ಬಹುಮುಖ ಪ್ರತಿಭೆಯನ್ನುಳ್ಳ ವ್ಯಕ್ತಿಯಾಗಿದ್ದ ಅವರು ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಪತ್ರಿಕೋದ್ಯಮ ಮತ್ತು ರಾಜಕೀಯದಂಥ ವಿಭಿನ್ನ ಕ್ಷೇತ್ರಗಳತ್ತ ದ್ಟೃ ಹರಿಸಿದ್ದು ಸಹಜವೇ ಆಗಿತ್ತು. ಅವರ ಸಾಹಿತ್ಯ ರಚನೆ ಅವರಿಗಿದ್ದ ಪೌರಾಣಿಕ ಪ್ರಜ್ಞೆ ಮತ್ತು ಒಲವನ್ನು ಸಾರುವಂತೆಯೇ ಅವರಿಗಿದ್ದ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನೂ, ಹೊಸ ಬೆಳವಣಿಗೆಗಳ ಬಗೆಗಿನ ಅವರ ಆಸಕ್ತಿಯನ್ನೂ ಸಾರಿ ಹೇಳುತ್ತದೆ. ಕಾದಂಬರಿ, ಸಣ್ಣಕಥೆ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ, ಜಾನಪದ, ಅನುವಾದ, ಸಂಪಾದನೆ ಮುಂತಾದ ಕ್ಷೇತ್ರಗಳಿಗೆ ಅವರು ನೀಡಿರುವ ಕಾಣಿಕೆ ವೈವಿಧ್ಯಮಯವಾದುದೂ, ಮಹತ್ವಪೂರ್ಣವಾದುದು ಆಗಿದೆ.