Select Size
Quantity
Product Description
ಕನ್ನಡದ ಹಿರಿಯ ಲೇಖಕಿ,ಸಂಶೋಧಕಿ,ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಡಾ.ಜ್ಯೋತ್ಸ್ನಾ ಕಾಮತ್ ಅವರು, ಇಸವಿ 1977 ರಿಂದ 1980ರವರೆಗಿನ ವರ್ಷಗಳನ್ನು ಕಲ್ಕತ್ತೆಯಲ್ಲಿ ಕಳೆದರು. "ಕಲ್ಕತ್ತ ದಿನಗಳನ್ನು" ಓದುತ್ತಿದ್ದಂತೆ ಕಾಲಯಂತ್ರದಲ್ಲಿ ಕುಳಿತು ಇತಿಹಾಸಕ್ಕೆ ಭೇಟಿ ಇತ್ತ ರೋಮಾಂಚನದ ಅನುಭವ!
ಬಂಗಾಲದ ನೆಲದಲ್ಲಿ ಅಪರೂಪದ ಸಾಧಕರನ್ನು ಭೆಟ್ಟಿಯಾದವರು,ಡಾ.ಜ್ಯೋತ್ಸ್ನಾ ಕಾಮತ್. ಸುಭಾಷ್ ಚಂದ್ರ ಬೋಸರ ಸ್ವಾತಂತ್ರ ಹೋರಾಟದ ಕರೆಗೆ ಓಗೊಟ್ಟು ತನ್ನ 14ನೇ ವಯಸ್ಸಿನಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ನನ್ನು ಗುಂಡಿಕ್ಕಿ ಕೊಂದ ಕ್ರಾಂತಿಕಾರಿ ಸುನೀತಿ ಚೌಧರಿ ಅವರನ್ನು ಕಂಡು ಮಾತನಾಡಿಸಿದವರು! ವಿಸ್ಮೃತಿಗೆ ಸರಿದ ಘಟನೆಗಳನ್ನು, ಧೀಮಂತ ವ್ಯಕ್ತಿಗಳನ್ನು ಡಾ.ಜ್ಯೋತ್ಸ್ನಾ ಜೀವಂತವಾಗಿಸಿದ್ದಾರೆ. ಕಲಕತ್ತೆಯ ಸ್ಮಶಾನಗಳಲ್ಲೂ ಅಲೆದಾಡಿ,18ನೇ ಶತಮಾನದ ಗೋರಿಗಳು ಹೇಳುವ ಕತೆಗಳನ್ನು ಸೆರೆಹಿಡಿದಿದ್ದಾರೆ. ನಮ್ಮ ನಡುವಿನ ಹಿರಿಯ ಚೇತನ ಡಾ.ಜ್ಯೋತ್ಸ್ನಾ ಕಾಮತ್, ಕಳೆದುಹೋದ ಚರಿತ್ರೆಗೆ ಕೊಂಡಿಯಾಗಿದ್ದಾರೆ.
Author
Dr Jyothsna Kamat
Binding
Soft Bound
Number of Pages
296
Publisher
Ankitha Pusthaka
Height
3 CMS
Length
22 CMS
Weight
300 GMS
Width
14 CMS
Language
Kannada