Quantity
Product Description
ಮಾರ್ಗಣ ಸಂಸ್ಕೃತಿ ಪ್ರಧಾನವಾದ ಹತ್ತು ಲೇಖನಗಳ ಸಂಚಯ. ಇಲ್ಲಿ ಇತಿಹಾಸ, ಪುರಾಣ, ವೇದಾಂತ, ಹಬ್ಬ, ಉತ್ಸವ, ಸಾಹಿತ್ಯಮೀಮಾಂಸೆ, ಸಮುದಾಯ ಅಧ್ಯಯನ ಮೊದಲಾದ ವಿಷಯಗಳನ್ನು ಒಳಗೊಂಡ ಬರೆಹಗಳಿವೆ. ವಸ್ತು, ವಿನ್ಯಾಸ ಮತ್ತು ವಿಶ್ಲೇಷಣೆಗಳ ದೃಷ್ಟಿಯಿಂದ, ಆಕರಸಾಮಗ್ರಿಯ ಸಮೃದ್ಧಿಯಿಂದ ಇಲ್ಲಿಯ ಬರೆಹಗಳಿಗೆ ಹೆಚ್ಚಿನ ನೆಲೆ-ಬೆಲೆಗಳಿವೆ. ಅನುಬಂಧವಾಗಿ ಬಂದಿರುವ ಸಂದರ್ಶನ ಲೇಖಕರ ಮತ್ತೆಷ್ಟೋ ಆಲೋಚನೆಗಳನ್ನು ಒಳಗೊಂಡು ಸದ್ಯದ ವಿಚಾರಕ್ರಮಕ್ಕೆ ಪೂರಕಸಾಮಗ್ರಿಯನ್ನು ಒದಗಿಸಿದೆ. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಅನೇಕ ಆಯಾಮಗಳ ಸ್ವಾರಸ್ಯಗಳ ಹುಡುಕಾಟವೇ 'ಮಾರ್ಗಣ'ದ ಹೂರಣ. ಸಾಹಿತ್ಯ-ಸಂಸ್ಕೃತಿಗಳ ಗಂಭೀರ ವಿದ್ಯಾರ್ಥಿಗಳಿಗೆ ಮುಖ್ಯವೆನಿಸುವ ಸಂಕಲನವಿದು
Author
Dr Shataavadhaani R Ganesh
Number of Pages
250
Publisher
Saahitya Prakashana (Hubbali)
Publication Year
2025
Height
2 CMS
Length
22 CMS
Weight
300 GMS
Width
14 CMS
Language
Kannada