Product Description
ಯಶಸ್ಸು ಬೇಕು ಎನ್ನುವುದು ಎಲ್ಲರ ಬಯಕೆ. ಆದರೆ ಹಾಗೆ ಬೇಕೆನ್ನುವವರಿಗೆಲ್ಲರಿಗೂ ಅದನ್ನು ಹೇಗೆ ಪಡೆಯಬೇಕೆಂಬುದರ ಸ್ಪಷ್ಟ ಅರಿವು ಇರಬೇಕೆಂದಿಲ್ಲ. ಅಂಥವರ ಸಹಾಯಕ್ಕಾಗಿಯೇ ಇದೊಂದು ಪ್ರಯತ್ನ. ಯಶಸ್ಸು ಒಂದು ಸಾಪೇಕ್ಷ ಸ್ಥಿತಿ. ಅದಕ್ಕೆ ವ್ಯಾಖ್ಯಾನ ಇದೆ. ಆದರೆ ವ್ಯಾಪ್ತಿಯ ಮಿತಿಯಿಲ್ಲ. ಒಬ್ಬನ ಯಶಸ್ಸಿನ ಅಳತೆಗೋಲನ್ನೇ ಇನ್ನೊಬ್ಬನಿಗೂ ಅನ್ವಯಿಸುವುದು ತಪ್ಪಾಗುತ್ತದೆ. ವ್ಯಕ್ತಿಯ ಸಾಮಾಜಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳ ನೆಲೆಯಲ್ಲಿ ಬದಲಾಗುವ ಈ ಯಶಸ್ಸಿನ ವ್ಯಾಪ್ತಿ ಅಷ್ಟೇ ವೈವಿಧ್ಯಮಯವಾಗಿಯೂ ಇರುತ್ತದೆ. ಆದರೆ ಮೂಲಭೂತವಾಗಿ ಯಶಸ್ವಿಯಾಗಬೇಕಾದರೆ ಮಾಡಬೇಕಾದ ಕೆಲಸ, ಹಿಡಿಯಬೇಕಾದ ದಾರಿ, ಅಳವಡಿಸಿಕೊಳ್ಳಬೇಕಾದ ಶಿಸ್ತು ಮತ್ತು ಆಗೀಗ್ಗೆ ಉಪಯೋಗಿಸಿಕೊಳ್ಳಬೇಕಾದ ಸಮಯ ಪ್ರಜ್ಞೆ ಇವುಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಂತಹ ವ್ಯತ್ಯಾಸವೇನೂ ಇರದು.