Quantity
Product Description
ಗಿಡದ ಮೇಲೆ ಕುಳಿತ ತೂಮನ್ನು ಒಂದು ಚೂರು ಸಪ್ಪಳವಾಗದಂತೆ ಮೆಲ್ಲನೆ ಅದರ ಬಾಲವನ್ನು ಗಪ್ಪನೆ ಹಿಡಿದು ಅದರ ಎರಡು ರೆಕ್ಕೆಗಳನ್ನು ಒಂದು ಮಾಡಿ ಅದರ ಮುಖವನ್ನು ನೋಡಿ ಖುಷಿಪಡುವಂತೆ ಲಂಕ್ಯಾನ ಎರಡು ರಟ್ಟೆಯನ್ನು ಹಿಡಿದು ಅವನ ತಾಯಿ ಮತ್ತು ಹೆಂಡತಿ ಬೈಯ್ಯುತ್ತ ಎಳೆಯುತ್ತಿದ್ದರು. ಲಂತ್ಯಾ ಬುಟ್ಟಿಯಲ್ಲಿ ಮಲಗಿಕೊಂಡ ಹಲ್ಲುಕಿತ್ತ ಹಾವಿನಂತೆ ಸುಮ್ಮನೆ ತಲೆಬಗ್ಗಿಸಿಕೊಂಡು ನಡೆಯುತ್ತಿದ್ದ. ಅಷ್ಟರಲ್ಲಿ ಯಾರೋ ಒಬ್ಬ “ಇಲ್ಲಿ ತನಕ ನಡಕಂತ ಬಂದಾನ ಅವನ ಹುಚ್ಚು ಬಿಡಬೇಕೆಂದರೆ ಈ ದೇವರ ದರ್ಶನನ ಮಾಡಿಸಿಕೊಂಡು ಹೋಗಿ" ಅಂದರು. ಆ ಮಾತು ನಿಜವೆಂಬಂತೆ ಗಟ್ಟಿಯಾಗಿ ಹಿಡಿದ ಲಂಕ್ಯಾನ ರಟ್ಟೆ ಬಿಟ್ಟು ನಿಂತಲ್ಲೆ ದೇವರಿಗೆ ಕೈಮುಗಿದರು. ತನ್ನನ್ನು ಕೈಹಿಡಿದು ಮಗುವಿನಂತೆ ಅವನ ಹೆಂಡತಿ ಮೆಲ್ಲಗೆ ಕರೆದುಕೊಂಡು ದೇವರ ದರ್ಶನಕ್ಕೆ ನಿಂತಳು. ಸುಮಾರು ಮೂರು ಕಿ.ಮೀ.ದಷ್ಟು ಜನ ಮೂರು ನಾಲ್ಕು ತಾಸುಗಳ ಕಾಯುವಿಕೆಯ ನಂತರ ದೇವರ ದರ್ಶನ ಆಯಿತು. ಕೆಲವೇ ಕೆಲವು ಸೆಕೆಂಡಗಳ ಒಳಗೆ ದೇವರ ಮುಖವನ್ನು ಮನದಲ್ಲಿ, ಕಣ್ಣಲ್ಲಿ ತುಂಬಿಕೊಂಡು ಹೊರನಡೆದರು.
Binding
Soft Bound
Author
Mudiraj Banada
Publisher
Vaishnavi Prakashana
Publication Year
2025
Number of Pages
96
Height
1 CMS
Length
22 CMS
Weight
100 GMS
Width
14 CMS
Language
Kannada